ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ನಿಧನಕ್ಕೆಶಾಸಕ ಡಾ.ಅಜಯ್ ಸಿಂಗ್ ಕಂಬನಿ

ಹೊಸದಿಗಂತ ವರದಿ,ಕಲಬುರಗಿ:

ಕೃಷಿ ವಿಜ್ಞಾನಿ ಡಾ.ಎಸ್.ಎ‌.ಪಾಟೀಲ್ ಅವರ ನಿಧನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್ ಕಂಬನಿ ಮಿಡಿದಿದ್ದಾರೆ.

ಡಾ.ಎಸ್.ಎ.ಪಾಟೀಲ್ ಅವರು ಕೃಷಿ ವಿಶ್ವವಿದ್ಯಾಲಯದ, ಧಾರವಾಡದ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.ಇವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಇವರು ಮೂಲತಃ ನನ್ನ ವಿಧಾನಸಭಾ ಮತಕ್ಷೇತ್ರದ ಜೇವರ್ಗಿ ತಾಲೂಕಿನ ಬಿರಾಳ ಬಿ ಗ್ರಾಮದವರಾಗಿದ್ದು, ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ದಿ.ಎನ್. ಧರ್ಮಸಿಂಗ್ ಅವರಿಗೂ ಹಾಗೂ ನನಗೂ ಬಹಳ ಆಪ್ತರಾಗಿದ್ದರು ಎಂದು ತಿಳಿಸಿದರು.

ಡಾ.ಎಸ್.ಎ.ಪಾಟೀಲ್ ಅವರು ಎರಡು ಬಾರಿ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಗಳಾಗಿ, ಐಎಆರೈ ನವದೆಹಲಿಯ ನಿರ್ದೇಶಕರಾಗಿ ಹಾಗು ಅಗ್ರಿಕಲ್ಚರ್ ಮಿಷನ್,ನ ಅಧ್ಯಕ್ಷರಾಗಿಯೂ ಕೂಡ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲಿ ಪ್ರಥಮ ಬಾರಿಗೆ ಬೀಜ ಗ್ರಾಮ ಯೋಜನೆಯನ್ನು ಹುಟ್ಟುಹಾಕಿ ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವ ಮೂಲಕ ಅಪಾರ ಸೇವೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಡಾ.ಎಸ್.ಎ.ಪಾಟೀಲ್ ಅವರ ನಿಧನದಿಂದ ದೇಶಕ್ಕೆ, ಇಡೀ ಕೃಷಿ ಕ್ಷೇತ್ರಕ್ಕೆ ಹಾಗೂ ಜೇವರ್ಗಿ ತಾಲೂಕಿಗೆ ಮಾತ್ರವಲ್ಲದೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು,ಅವರ ಕುಟುಂಬಕ್ಕೆ ಭಗವಂತನು ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!