ಹೊಸದಿಗಂತ ವರದಿ,ಹಾವೇರಿ:
ಮೋಬೈಲ್ ಕಳ್ಳರ ಕೈಚಳಕ ನಡೆಯದೇ ಸಾರ್ವಜನಿಕರ ಕೈಗೆ ಸಿಕ್ಕು ಧರ್ಮದೇಟು ತಿಂದು ಕೊನೆಗೆ ಪೊಲೀಸರ ವಶವಾದ ಘಟನೆ ಸೋಮವಾರ ಹಿರೇಕೆರೂರ ಪಟ್ಟಣದಲ್ಲಿ ಜರುಗಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ ಜರುಗಿತು.
ಸಚಿವ ಬಿಸಿಪಿ ಅವರ ಜನ್ಮ ದಿನಾಚರಣೆ ಆಚರಣೆಗೆ ಆಗಮಿಸಿದ್ದ ಸಹಸ್ರಾರು ಜನರನ್ನು ಕಂಡು ಮೋಬೈಲ್ ಕಳ್ಳರು ಅವರಿಗೆ ಹಬ್ಬ ಆಗುತ್ತದೆ ಎಂದು ತಿಳಿದುಕೊಂಡಿದ್ದರೆನೋ ಆದರೆ ಅವರಿಗೆ ಅದು ಪೊಲೀಸರ ಅಥಿತಿಗಳಾಗುತ್ತೇವೆಂದು ಎಂದು ಕಂಡುಕೊಂಡಿರಲಿಲ್ಲವೆನೋ.
ಸೇರಿದ್ದ ಸಹಸ್ರಾರು ಜನರಲ್ಲಿ ಮೋಬೈಲ ಕಳ್ಳರು ಮೋರ್ಬಯ ಕಳ್ಳತನಕ್ಕೆ ಮುಂದಾದ ಸಂದರ್ಭದಲ್ಲಿ ಕಳ್ಳರಿಗಿಂತ ಚಾಣಾಕ್ಷರಾಗಿದ್ದ ಸಾರ್ವಜನಿಕರು ಕಳ್ಳರನ್ನು ಮೋಬೈಲ ಕಳ್ಳತನ ಮಾಡುವ ಸಂದರ್ಭದಲ್ಲಿ ಹಿಡಿದಿದ್ದಾರೆ. ದಾಂಡಿಗನಾಗಿದ್ದ ಓರ್ವ ಕಳ್ಳನಿಗೆ ಧರ್ಮದೇಟನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಕಳ್ಳ ಸಾರ್ವಜನಿಕರಿಗೆ ಹೊಡಿಯಲು ಮುಂದಾದಾಗ ಅನೇಕ ಸಾರ್ವಜನಿಕರು ಮುಗಿ ಬಿದ್ದು ಧರ್ಮದೇಟು ನೀಡುವುದಕ್ಕೆ ಮುಂದಾದಾಗ ಅಕ್ಕಪಕ್ಕದಲ್ಲಿನೇ ಇದ್ದ ಪೋಲೀಸರು ಬಂದು ಅವನನ್ನು ವಶಕ್ಕೆ ಪಡೆದು ಅವನನ್ನು ಸಾರ್ವಜನಿಕರಿಂದ ಕಾಪಾಡಿದ್ದಾರೆ.
ಇದೇ ರೀತಿ ಸಾರ್ವಜುನಿಕರ ಮೋಬೈಲ ಕಳ್ಳತನ ಮಾಡುವ ಸಂದರ್ಭದಲ್ಲಿ ಇನ್ನು ಮೂವರು ಕಳ್ಳರು ಸಾರ್ವಜನಿಕರ ಕೈಗೆ ಸಿಕ್ಕು ಬಿದ್ದಿದ್ದಾರೆ. ಅವರೆಲ್ಲರನ್ನು ಸಾರ್ವಜನಿಕರು ಧರ್ಮದೇಟು ನೀಡುವುದಕ್ಕೆ ಮುಂದಾದ ಸಂದರ್ಭದಲ್ಲಿ ಪೊಲೀಸರು ಬಂದು ಅವರ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ತಗೆದುಕೊಂಡು ಹೋದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ನನ್ನ ಮೋಬೈಲ ಕಳುವಾಗಿದೆ ನನ್ನದು ಕಳ್ಳತನವಾಗಿದೆ ಎಂದು ಹೇಳತ್ತಿದ್ದುದು ಕಂಡುಬಂದಿತು. ಅಂದಾಜು ನೂರಕ್ಕೂ ಅಧಿಕ ಮೋಬೈಲ ಕಳವಾಗಿವೆ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಕೇಳಿಬಂದಿತು.