ಹೊಸದಿಗಂತ ತುಮಕೂರು:
ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವಿಷಯವನ್ನು ರಾಜ್ಯದ ಅಹಿಂದ ಸಮುದಾಯ ಗಂಭೀರವಾಗಿ ಪರಿಗಣಿಸಿದ್ದು ವಿಪಕ್ಷಗಳು ಪಾದಯಾತ್ರೆ ನಡೆಸಿದರೆ ನಾವೂ ಕೂಡ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಸಚಿವ ರಾಜಣ್ಣ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ಈಗಾಗಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿದೆ, ಬಿಜೆಪಿ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಕೈಗೊಂಡಿದೆ, ನಾ ಕಳ್ಳ, ಪರರನ್ನು ನಂಬ ಎಂಬಂತೆ ವರ್ತಿಸುತ್ತಿದ್ದಾರೆ, 2011ರಲ್ಲಿ ವಿಧಾನ ಪರಿಷತ್ ನಲ್ಲಿ ಅಂದಿನ ಸಿಎಂ ಯಡಿಯೂರಪ್ಪ ನೀಡಿದ ನಡಾವಳಿಯಲ್ಲಿ ವಿಪಕ್ಷಗಳ ಮುಖಂಡರ ಬಂಡವಾಳವಿದೆ, ಅದರಲ್ಲಿ ಯಾರೆಲ್ಲಾ ಸೈಟು ಪಡೆದಿದ್ದಾರೆ ಎಂಬುದು ಇದೆ ಎಂದರು.
ಹಗರಣಗಳ ವಿರುದ್ಧ ಸರ್ಕಾರ ಕಠಿಣ ಕ್ರಮತೆಗೆದುಕೊಂಡು ತನಿಖೆ ನಡೆಸುತ್ತಿದ್ದರೂ ಇಡಿ, ಪ್ರತಿಭಟನೆ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಗೆ ಮಸಿ ಬಳಿಯಲು ಕೇಂದ್ರ ಸರ್ಕಾರ ಪ್ರಯೋಜಿತ ಹುನ್ನಾರ ನಡೆಯುತ್ತಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ನಾಯಕರಾಗಿದ್ದು ಬಂಗಾರಪ್ಪ ಅವರ ವಿರುದ್ಧ ಮಾಡಿದಂತೆ ಸಣ್ಣಪುಟ್ಟ ವಿಷಯಗಳನ್ನೇ ದೊಡ್ಡದು ಮಾಡಲು ಮುಂದುವರಿದ ವಿಪಕ್ಷಗಳು ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಸ್ತುತ ಆರೋಪ ಮಾಡುತ್ತಿರುವವರೇ ಮೂಡಾ ಸೈಟು ಪಡೆಯುವಲ್ಲಿ ಹೆಚ್ಚು ಫಲಾನುಭವಿಗಳಾಗಿದ್ದು ವಾಸಸ್ಥಳದ ನಕಲಿ ದಾಖಲೆಗಳನ್ನು ನೀಡಿ ಮೂಡಾದಲ್ಲಿ ನಿವೇಶನ ಪಡೆದಿದ್ದಾರೆ. ಈ ನಿವೇಶನಗಳನ್ನು ವಾಪಸ್ ನೀಡಿ ನಂತರ ಸಿಎಂ ಆರೋಪ ಮಾಡಲಿ ಎಂದು ವಿಪಕ್ಷಗಳಿಗೆ ಸವಾಲೆಸೆದರು.
ಮನುವ್ಯಾದಿಗಳ ಚೌಕಿದಾರರ ಕುತಂತ್ರಗಳಿಗೆ ಏಟಿಗೆ ಎದಿರೇಟು ಕೊಡಲೇಬೇಕು,, ತಳವರ್ಗದವರು ರಾಜಕೀಯ ಅಧಿಕಾರದಲ್ಲಿ ಇರವುದು ಅವರು ಸಹಿಸುವುದಿಲ್ಲ,, ದುರಂತವೆಂದರೆ ಅಮಿಷಕ್ಕೊಳಗಾಗಿ ವ್ಯಾಧಿಗಳ ಗುಂಪಿಗೆ ಸೇರಿಸಿಕೊಂಡ ಶೂದ್ರ ಮುಂಡೇವು,, ಸ್ವಾಭಿಮಾನ ಇಲ್ಲ,,ಹಗರಣಗಳ ಬಗ್ಗೆ ದೊಡ್ಡ ದೊಡ್ಡ ಗಂಟೆ ಬಾರಿಸುವ ಭಯಂಕರ ನಾಯಕರಲ್ಲಿ ನಾನು ಶುದ್ಧ ಹಸ್ತನೆಂದು ಹೇಳುವ ದಮ್ಮು ಇದೆಯಾ,,