Ahmedabad Plane Crash: ಕೇಂದ್ರ ಸರ್ಕಾರವು ಸಂತ್ರಸ್ತರ ಜೊತೆ ಇರಲಿದೆ: ಜೋಶಿ ಅಭಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಭಾರತ ಸರ್ಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಹಮದಾಬಾದ್ ವಿಮಾನ ಅಪಘಾತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣ ತನಿಖೆ ನಡೆಸಲಿದೆ ಎಂದು ಹೇಳಿದರು.

Al 171 ವಿಮಾನ ಅಪಘಾತದ ಬಗ್ಗೆ ಕೇಂದ್ರ ಸಚಿವರು ತೀವ್ರ ಆಘಾತ ವ್ಯಕ್ತಪಡಿಸಿ ಇದನ್ನು “ದುರದೃಷ್ಟಕರ” ಘಟನೆ ಎಂದು ಬಣ್ಣಿಸಿದರು.
“ಇದು ತುಂಬಾ ದುರದೃಷ್ಟಕರ, ಮತ್ತು ಭಾರತ ಸರ್ಕಾರ ಮತ್ತು ಡಿಜಿಸಿಎ ಇದನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತದೆ… ಅವರು ತಮಗೆ ಬೇಕಾದ ಯಾವುದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಅದರೊಂದಿಗೆ, ಗಾಯಗೊಂಡವರನ್ನು ನಾವು ಸಂಪೂರ್ಣವಾಗಿ ನೋಡಿಕೊಳ್ಳುತ್ತೇವೆ… ಸರ್ಕಾರ ಮತ್ತು ಡಿಜಿಸಿಎ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಗಂಭೀರ ವಿಚಾರಣೆ ನಡೆಯಲಿದೆ…” ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.

ಬೋಯಿಂಗ್ 787-8, ಏರ್ ಇಂಡಿಯಾ ಫ್ಲೈಟ್ 171 ನಲ್ಲಿ ಒಟ್ಟು 241 ಜನರು, ಇದರಲ್ಲಿ 12 ಸಿಬ್ಬಂದಿಗಳು ಸೇರಿ, ಅಹಮದಾಬಾದ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಪ್ರಯಾಣಿಕರ ವಿಮಾನವು ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಗುರುವಾರ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನಿವಾಸಿ ವೈದ್ಯರ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತು. ಪವಾಡಸದೃಶವೆಂಬಂತೆ, ಒಬ್ಬ ವ್ಯಕ್ತಿ ಈ ಮಾರಕ ಅಪಘಾತದಿಂದ ಬದುಕುಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!