April 5, 2026
Sunday, April 5, 2026
spot_img

ಅಹಮದಾಬಾದ್ ವಿಮಾನ ದುರಂತ: ಬ್ಲ್ಯಾಕ್‌ ಬಾಕ್ಸ್‌ ಡೇಟಾ ಬಿಡುಗಡೆಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಂತ್ರಸ್ತರ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತ ಸಂಭವಿಸಿ 10 ತಿಂಗಳ ಬಳಿಕ ಸಂತ್ರಸ್ತ ಕುಟುಂಬಸ್ಥರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಹಾಗು ಬ್ಲ್ಯಾಕ್‌ ಬಾಕ್ಸ್‌ ನಲ್ಲಿರುವ ಮಾಹಿತಿಯನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

2025ರ ಜೂ.12ರಂದು ಸಂಭವಿಸಿದ್ದ ಅಹಮದಾಬಾದ್‌ ವಿಮಾನ ದುರಂತದಲ್ಲಿ ಸ್ಥಳೀಯರು ಸೇರಿ 275 ಜನರ ಸಾವನ್ನಪ್ಪಿದ್ದರು.ಈ ವೇಳೆ ಕಾರ್ಯಾಚರಣೆ ಸಂದರ್ಭ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು. ಇದನ್ನು ವಶಪಡಿಸಿಕೊಂಡಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಆರಂಭಿಸಿತ್ತು.

ಇದೀಗ ಸಂತ್ರಸ್ತ ಕುಟುಂಬಸ್ಥರು, ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತು ಬ್ಲ್ಯಾಕ್‌ ಬಾಕ್ಸ್‌ ಡೇಟಾದಲ್ಲಿ ದುರಂತದ ನಿಖರ ಮಾಹಿತಿ ಇರುವ ಸಂಭವವಿದ್ದು, ಹೀಗಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಪತ್ರದ ಪ್ರತಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ವಿಮಾನ ಅಪಘಾತ ತನಿಖಾ ಬ್ಯೂರೋ, ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೂ ರವಾನಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !