ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಹಿಂದಿಯ ಬಿಗ್‌ಬಾಸ್‌ನಲ್ಲಿ ಸ್ಪೆಶಲ್ ಗೆಸ್ಟ್ ಎಂಟ್ರಿ ಕೊಡಲಿದ್ದಾರೆ. ಆ ಗೆಸ್ಟ್‌ನ್ನು ಮೀರಿಸೋಕೆ ಯಾರಿಗೂ ಸಾಧ್ಯವಾಗದೇ ಇರಬಹುದು.. ಯಾರಾ ಸುಂದರಿ??
ಈಕೆ ದೊಡ್ಮನೆಗೆ ಎಂಟ್ರಿ ಕೊಡುವ ಮೂಲಕ ಇತಿಹಾಸ ಸೃಷ್ಟಿ ಮಾಡಲಿದ್ದಾಳೆ. ಇವಳನ್ನು ನೋಡಿ ಇತರ ಸ್ಪರ್ಧಿಗಳಿಗೆ ಈಗಲೇ ಟೆನ್ಷನ್ ಕೂಡ ಶುರುವಾಗಿದೆ. ಹಾಗಿದ್ದರೆ ಯಾರೀ ಸುಂದರಿ ಎಂದು ನೋಡುವುದಾದರೆ, ಇವಳು ಕೃತಕ ಬುದ್ಧಿಮತ್ತೆಯ ಸುಂದರಿ. ಅಂದರೆ ರೋಬೋಟ್.
ಭಾರತೀಯ ರಿಯಾಲಿಟಿ ಟೆಲಿವಿಷನ್‌ಗೆ ಒಂದು ಹೊಸ ಹೆಜ್ಜೆಯಾಗಿ, ಬಿಗ್ ಬಾಸ್ 19 ಯುಎಇಯ ವೈರಲ್ AI ರೋಬೋಟ್ ಗೊಂಬೆ ಹಬುಬುಳನ್ನು ಮಾನವೇತರ ಸ್ಪರ್ಧಿಯಾಗಿ ಪ್ರದರ್ಶಿಸಲು ಸಜ್ಜಾಗಿದೆ ಎನ್ನುವ ಸುದ್ದಿ ಬಂದಿದೆ.
ಕಳೆದ ಸೀಸನ್‌ನಲ್ಲಿ ಗಧರಾಜ್ ಎಂಬ ಕತ್ತೆಯನ್ನು ಪರಿಚಯಿಸಿದ ಬಳಿಕ, ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಐ ಸ್ಪರ್ಧಿಯನ್ನು ಪರಿಚಯಿಸಲಾಗುತ್ತಿದೆ. ಈ ಗೊಂಬೆ 17 ಸ್ಪರ್ಧಿಗಳಲ್ಲಿ ಒಬ್ಬಳಾಗಿರಲಿದ್ದಾಳೆ ಎಂಬ ಗಾಸಿಪ್‌ಗಳು ಕೇಳಿ ಬಂದಿವೆ. ಅಷ್ಟಕ್ಕೂ ಈಕೆ ಸಾಮಾಜಿಕವಾಗಿ ಸಂವಹನ ನಡೆಸಬಲ್ಲಳು. ಅಡುಗೆಯಿಂದ ಹಿಡಿದು ಹಾಡುವವರೆಗೆ ಎಲ್ಲದರಲ್ಲಿಯೂ ಎಕ್ಸ್ಪರ್ಟ್. ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಳು. ಮನೆಯಲ್ಲಿ ಈಕೆಯ ಉಪಸ್ಥಿತಿಯು ಆಟಕ್ಕೆ ಸಂಪೂರ್ಣ ಹೊಸ ಚಲನಶೀಲತೆಯನ್ನು ತರಲಿದೆ ಎನ್ನಲಾಗಿದೆ.