ಮದುಮಗನ ಗೆಟಪ್‌ನಲ್ಲಿ ಎಲಾನ್ ಮಸ್ಕ್‌, ಫೋಟೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಕಳೆದ 10 ವರ್ಷಗಳ ತಂತ್ರಜ್ಞಾನಕ್ಕೂ ಕಳೆದ 5 ವರ್ಷಗಳ ತಂತ್ರಜ್ಞಾನಕ್ಕೂ ಇಂದಿನ ತಂತ್ರಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಅದರ ಭಾಗವಾಗಿ, ಬ್ಲಾಕ್ ಚೈನ್ ನಿಂದ ಕೃತಕ ಬುದ್ಧಿಮತ್ತೆ (AI) ಮಟ್ಟಕ್ಕೆ ಪ್ರಗತಿ ಹೊಂದಿದ್ದೇವೆ. AI ತಂತ್ರಜ್ಞಾನದ ಜಗತ್ತಿನಲ್ಲಿ ತಾಂತ್ರಿಕವಾಗಿ ಕ್ರಾಂತಿಯನ್ನು ಮಾಡುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ.. ಕಲಾವಿದರ ಕಲ್ಪನೆಗೂ ಎಐ ರೆಕ್ಕೆಪುಕ್ಕ ನೀಡುತ್ತಿದೆ. AI ತಂತ್ರಜ್ಞಾನವು ಹೊಸ ಅವತಾರಗಳನ್ನು ಜನಸಾಮಾನ್ಯರಿಗೆ ಪರಿಚಯಿಸುತ್ತಿದೆ.

ಜಗತ್ತಿನ ಅತ್ಯಂತ ಕುಬೇರರು ಬಡವರಾದರೆ (ಭಿಕ್ಷುಕರು) ಏನಾಗಬಹುದು.. ಸ್ಟಾರ್ ಕ್ರಿಕೆಟಿಗರು, ಸ್ಟಾರ್ ಹೀರೋಗಳು ಹುಡುಗಿಯರಾದರೆ ಹೇಗಿರಬಹುದೆಂದು ಊಹಿಸಿ ಎಐ ಸಹಾಯದಿಂದ ರಚಿಸಿರುವ ಚಿತ್ರಗಳನ್ನು ನಾವು ಈಗಾಗಲೇ ನೋಡಿದ್ದೇವೆ.

ಇದೀಗ ವಿಶ್ವದ ಅತ್ಯಂತ ಪ್ರಸಿದ್ಧ ಟ್ವಿಟರ್ ನಾಯಕ ಎಲಾನ್ ಮಸ್ಕ್ ಮದುಮಗನಾದರೆ ಹೇಗೆ ಕಾಣುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಎಲಾನ್‌ ಮಸ್ಕ್ ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿತು. ಇತರ ಕೆಲವು ಫೋಟೋಗಳಲ್ಲಿ, ಅವರು ನಗುತ್ತಾ ಸಮಾರಂಭವನ್ನು ಆನಂದಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ನೆಟ್‌ನಲ್ಲಿ ವೈರಲ್ ಆಗಿವೆ. ಇದನ್ನು ನೋಡಿದ ನೆಟ್ಟಿಗರು..ಅದ್ಬುತ, ನಂಬಲಾಗುತ್ತಿಲ್ಲ.. ಎಂದು ಕಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!