ಜಿಯೋ ಇನ್ಸ್‌ಟಿಟ್ಯೂಟ್ ಜತೆಗೆ ಎಐಸಿಟಿಐ ಪಾಲುದಾರಿಕೆ: ಎಐ ಕುರಿತು ತರಬೇತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ಸೈನ್ಸ್ ಕುರಿತು ಬೋಧಕ ವೃಂದದವರಿಗೆ ಬೆಳವಣಿಗೆ ಕಾರ್ಯಕ್ರಮಗಳಿಗಾಗಿ ಜಿಯೋ ಇನ್‌ಸ್ಟಿಟ್ಯೂಟ್ ಜತೆಗೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ಪಾಲುದಾರಿಕೆ ಮಾಡಿಕೊಂಡಿದೆ.

ಎಐಸಿಟಿಇಯ ಅಟಲ್- ATAL (ಎಐಸಿಟಿಇ ತರಬೇತಿ ಮತ್ತು ಕಲಿಕೆ) ಕಾರ್ಯಕ್ರಮದ ಅಡಿಯಲ್ಲಿ ಈ ಸಹಯೋಗದ ಪ್ರಯತ್ನ ಪ್ರಾರಂಭಿಸಲಾಗಿದೆ. ಎಐಸಿಟಿಇ ಅನುಮೋದಿತ ಸಂಸ್ಥೆಗಳಿಂದ ಅಧ್ಯಾಪಕರ ಕೌಶಲವನ್ನು ಹೆಚ್ಚಿಸುವ ಮತ್ತು ಪುನರ್ ಕೌಶಲ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ವಿಶ್ವದರ್ಜೆಯ ಕೃತಕ ಬುದ್ಧಿಮತ್ತೆ ಹಾಗೂ ಡೇಟಾ ಸೈನ್ಸ್ ಕಾರ್ಯಕ್ರಮಕ್ಕೆ ಖ್ಯಾತಿ ಪಡೆದಿರುವ ಜಿಯೋ ಇನ್‌ಸ್ಟಿಟ್ಯೂಟ್ ಈ 5-ದಿನಗಳ ವಸತಿ ಸಹಿತ ಬೋಧಕ ವೃಂದದ ಬೆಳವಣಿಗೆ ಕಾರ್ಯಕ್ರಮಕ್ಕೆ ಆಯೋಜಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಎಐಸಿಟಿಇ ಅಧ್ಯಕ್ಷರಾದ ಪ್ರೊ.ಟಿ.ಜಿ. ಸೀತಾರಾಮ್ ಅವರು ಖುದ್ದಾಗಿ ಇದೇ ಆಗಸ್ಟ್ 21ರಂದು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್‌ನ ಆಳವಾದ ತಿಳಿವಳಿಕೆಯೊಂದಿಗೆ ಶೈಕ್ಷಣಿಕ ನಾಯಕರು ಮತ್ತು ಹಿರಿಯ ಅಧ್ಯಾಪಕ ಸದಸ್ಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಈ ಸಹಯೋಗದ ಉಪಕ್ರಮ ಹೊಂದಿದೆ ಮತ್ತು ತೀವ್ರ ಕಲಿಕೆಗಾಗಿ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಿಕೊಳ್ಳುವ ನೈತಿಕ ಪರಿಗಣನೆಗಳಿಗೆ ಒತ್ತು ನೀಡುತ್ತದೆ. ಈ ಕಾರ್ಯಕ್ರಮವು ಅಧ್ಯಾಪಕರು ಸೇರಿದಂತೆ ಆಯ್ದ ಎಐಸಿಟಿಇಯ 40 ಸದಸ್ಯರಿಗೆ  ತರಬೇತಿಯನ್ನು ನೀಡುತ್ತದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!