ಹೊಸದಿಗಂತ ಡಿಜಿಟಲ್ ಡೆಸ್ಕ್:
ಋಷಿಕೇಶ ಏಮ್ಸ್ ನಿಂದ ಕೇದಾರನಾಥಕ್ಕೆ ಬಂದಿದ್ದ ಏರ್ ಅಂಬುಲೆನ್ಸ್ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.
ಋಷಿಕೇಶ ಏಮ್ಸ್ನಿಂದ ತುರ್ತು ವೈದ್ಯಕೀಯ ಸೇವೆಯ ಅಡಿ ರೋಗಿಯನ್ನು ಕರೆದೊಯ್ಯಲು ಕೇದಾರನಾಥಕ್ಕೆ ಹೆಲಿಕಾಪ್ಟರ್ ಬಂದಿತ್ತು. ಇನ್ನೂ 20 ಮೀಟರ್ ದೂರದಲ್ಲಿರುವಾಗಲೇ ಹಿಂಭಾಗ ಮುರಿದು ಹೆಲಿಕಾಪ್ಟರ್ ಪತನಗೊಂಡಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಏರ್ ಆಂಬುಲೆನ್ಸ್ನಲ್ಲಿದ್ದ ಇಬ್ಬರು ವೈದ್ಯರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ.
ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಯಬೇಕಿದೆ.
केदारनाथ में बड़ा हादसा होने से बचा, एयर एम्बुलेंस में तकनीकी खराबी आने से इमरजेंसी लैंडिंग करनी पड़ी। यह एयर एम्बुलेंस एम्स ऋषिकेश की बताई जा रही है। #emergencylanding #kedarnath pic.twitter.com/B76JOS2MTe
— Ajit Singh Rathi (@AjitSinghRathi) May 17, 2025