ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಾರಿಗೆ ಬಸ್ಸುಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದ ಶಿವಮೊಗ್ಗ ಹಾಗೂ ಬೆಂಗಳೂರು, ಬೆಂಗಳೂರು – ಶಿವಮೊಗ್ಗ ನಡುವೆ ನೂತನ ಹವಾ ನಿಯಂತ್ರಿತ ಇ-ಬಸ್ಸುಗಳ ಕಾರ್ಯಾಚರಣೆ ಆರಂಭವಾಗಿದೆ.
ಈ ಬಗ್ಗೆ ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಹಿತಿ ನೀಡಲಾಗಿದ್ದು, ನಿಗಮದಿಂದ ಸುಸರ್ಜಿತವಾದ ನೂತನ ಹವಾ ನಿಯಂತ್ರಿತ 10 ಇವಿ ಪವರ್ ಪ್ಲಸ್ ಬಸ್ಸುಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಮೇ 27ರಂದು ಒಂದು ನೂತನ ಹವಾ ನಿಯಂತ್ರಿತ ಇ-ಬಸ್ ಅನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸಂಚಾರ ಪ್ರಾರಂಭಿಸುತ್ತಿರುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವಂತ ಇ-ಬಸ್ಸಿನ ಪ್ರಯಾಣ ದರ ರೂ.600 ಆಗಿದ್ದು, ಮುಂದಿನ ದಿನಗಳಲ್ಲಿ ಉಳಿದ 9 ಹವಾ ನಿಯಂತ್ರಿತ ಇ-ಬಸ್ಸುಗಳನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಶೀಘ್ರ ಸಂಚಾರ ಪ್ರಾರಂಭಿಸಲಾಗುತ್ತದೆ ಎಂದಿದ್ದಾರೆ.
ಪ್ರತಿ ದಿನ ಮಧ್ಯಾಹ್ನ 12ಕ್ಕೆ ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದ್ದು, ಸಂಜೆ 6ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಟು, ಶಿವಮೊಗ್ಗವನ್ನು ಮರು ದಿನ ಬೆಳಿಗ್ಗೆ 5ಕ್ಕೆ ತಲುಪಲಿದೆ.
ಸಾರಿಗೆ ಬಸ್ ಪ್ರಯಾಣಿಕರು ಇಂದಿನಿಂದ ಶಿವಮೊಗ್ಗ-ಬೆಂಗಳೂರು ನಡುವೆ ಪ್ರಾರಂಭವಾಗುತ್ತಿರುವಂತ ಹವಾ ನಿಯಂತ್ರಿತ ಇ-ಬಸ್ಸಿನಲ್ಲಿ ಪ್ರಯಾಣಿಸಲು https://awatar.ksrtc.in ಜಾಲತಾಣಕ್ಕೆ ಭೇಟಿ ನೀಡಿ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.