ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 27,2017ರಂದು ನಿಯಂತ್ರಣ ರೇಖೆಯ ಮೇಲೆ ನಡೆದ ಕಾದಾಟದಲ್ಲಿ ಪಾಕಿಸ್ತಾನದ ಎಫ್-16ನ್ನು ಹೊಡೆದುರುಳಿಸಿ, ಪಾಕಿಸ್ತಾನದ ಗಡಿಯೊಳಗೆ ಇಳಿದು ಶೌರ್ಯ ಮೆರೆದಿದ್ದ ಗ್ರೂಪ್ ಕ್ಯಾಪ್ಟನ್, ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಅವರು ತಮ್ಮ ಸೇವಾ ಅವಧಿ ಮುಗಿಯುವ ಮುನ್ನವೇ ವಾಯುಪಡೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನಿವೃತ್ತಿ ನಂತರ ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕಮರ್ಷಿಯಲ್ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಖದರ್ರೇ ಬೇರೆ!
2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಫೆ. 27ರಂದು ಪಾಕ್ ಯುದ್ಧವಿಮಾನಗಳು ಭಾರತದ ಗಡಿಯನ್ನು ಪ್ರವೇಶಿಸಿದ್ದವು. ಈ ವೇಳೆ ಅಭಿನಂದನ್ ತಮ್ಮ ಮಿಗ್ -21 ಬೈಸನ್ ವಿಮಾನದ ಮೂಲಕ ಪಾಕ್‌ನ ಎಫ್-16 ವಿಮಾನವನ್ನು ಹೊಡೆದು ಉರುಳಿಸಿದ್ದರು.
ಪಾಕ್ ನೆಲದಲ್ಲಿ ಕಾಲಿಟ್ಟಿದ್ದ ಅಭಿನಂದನ್
ಯುದ್ಧದ ಸಮಯದಲ್ಲಿ ಅಭಿನಂದನ್ ಅವರ ವಿಮಾನಕ್ಕೂ ಹಾನಿಯಾಗಿತ್ತು. ಈ ವೇಳೆ ಅವರು ಪ್ಯಾರಾಚೂಟ್ ಮೂಲಕ ವಿಮಾನದಿಂದ ಬೇರ್ಪಟ್ಟಿದ್ದರು. ಇಳಿಯುವಾಗ ಅವರು ಪಾಕ್ ಆಶ್ರಮಿತ ಕಾಶ್ಮೀರದ ನೆಲಕ್ಕೆ ಇಳಿದ್ದರು. ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ತದನಂತರ ಅವರಿಗೆ ದೈಹಿಕ ಹಿಂಸೆಯನ್ನು ನೀಡಲಾಗಿತ್ತು. ಆದರೆ ಯಾವುದಕ್ಕೂ ಅಭಿನಂದನ್ ಜಗ್ಗಿರಲಿಲ್ಲ.

ಅವರ ಸ್ಥಿರತೆ, ದೈರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು. ರಾಜತಾಂತ್ರಿಕ ಒತ್ತಡ ಮಣಿದ ಪಾಕ್ ಸರ್ಕಾರ ಮಾರ್ಚ್ ಎರಡರಂದು ವಾಘಾ ಬಾರ್ಡರ್ ಮೂಲಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.



