ಲ್ಯಾಂಡ್ ಆಗುತ್ತಿದ್ದಂತೆ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಅರೆಸ್ಟ್! ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನ್ಯೂಯಾರ್ಕ್‌ನಿಂದ ಮುಂಬೈಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವಿಮಾನದ ಕ್ಯಾಬಿನ್ ಕ್ರೂನನ್ನು ಡೈರೆಕ್ಟೋರೇಟ್ ಆಫ್ ರೆವನು ಇಂಟಲಿಜೆನ್ಸ್ (DRI) ಅಧಿಕಾರಿಗಳು ಬಂಧಿಸಿರುವ ಘಟನೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನದ ಕ್ಯಾಬಿನ್ ಕ್ರೂ ಮೇಲೆ 1.41 ಕೋಟಿ ರೂ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ಕಳ್ಳಸಾಗಣೆ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ. ಸುಮಾರು 1373 ಗ್ರಾಂ ತೂಕದ ಚಿನ್ನವನ್ನು ಅಮೆರಿಕದ ನ್ಯೂಯಾರ್ಕ್‌ನಿಂದ ಭಾರತದವರೆಗೆ ಸಾಗಿಸಲು ಯತ್ನಿಸಲಾಗಿತ್ತು. ಡಿಆರ್‌ಐ ಅಧಿಕಾರಿಗಳಿಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿಯಿದ್ದು, ವಿಮಾನ ಲ್ಯಾಂಡ್ ಆದ ತಕ್ಷಣ ಶೋಧ ಕಾರ್ಯ ಆರಂಭಿಸಿ ಕ್ಯಾಬಿನ್ ಕ್ರೂನನ್ನು ಬಂಧಿಸಿದ್ದಾರೆ.

ಪ್ರಾರಂಭಿಕ ತಪಾಸಣೆಯಲ್ಲಿ ಯಾವುದೇ ಚಿನ್ನ ಸಿಗದಿದ್ದರೂ, ಸಿಬ್ಬಂದಿಯ ಅನುಮಾನಾಸ್ಪದ ವರ್ತನೆ ಆಧರಿಸಿ ಗಂಭೀರವಾಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿ ಚಿನ್ನ ಕಳ್ಳ ಸಾಗಾಣೆ ಮಾಡಿದ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇಷ್ಟೇ ಅಲ್ಲ ತಾನು ಕಳ್ಳಸಾಗಾಣೆ ಮಾಡಿರುವ ಚಿನ್ನವನ್ನು ಎಲ್ಲಿ ಅಡಗಿಸಿಟ್ಟಿರುವುದಾಗಿ ಹೇಳಿದ್ದಾನೆ. ಅಲ್ಲದೆ, ಇಂತಹ ಹಲವು ಪ್ರಕರಣಗಳಲ್ಲಿ ತಾನೇ ಭಾಗಿಯಾಗಿದ್ದೂ ಎಂದು ಹೇಳಿದ್ದಾನೆ.

ಈ ಘಟನೆ ಹಿನ್ನಲೆ DRI ಮತ್ತೊಬ್ಬ ವ್ಯಕ್ತಿಯನ್ನೂ ಬಂಧಿಸಿದ್ದು, ಇವರ ಹಿಂದೆ ದೊಡ್ಡ ಚಿನ್ನ ಕಳ್ಳಸಾಗಣೆ ಜಾಲವಿರುವ ಶಂಕೆಯಿದೆ. ವಿಮಾನ ಸಿಬ್ಬಂದಿಯನ್ನು ಆಮಿಷ ಒಡ್ಡಿ, ಬೆದರಿಕೆ ಹಾಕಿ ಈ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!