ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿ 17 ರಿಂದ ಉತ್ತರ ಪ್ರದೇಶದ ದೇವಾಲಯ ಪಟ್ಟಣ ಅಯೋಧ್ಯೆಯಿಂದ ಬೆಂಗಳೂರು ಮತ್ತು ಕೋಲ್ಕತ್ತಾಗೆ ಹೊಸ ಮಾರ್ಗಗಳನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಶುಕ್ರವಾರ ಪ್ರಕಟಿಸಿದೆ. ವಿಮಾನಯಾನವು ಈ ಮಾರ್ಗಗಳಲ್ಲಿ ನೇರ ವಿಮಾನಗಳನ್ನು ನಿರ್ವಹಿಸಲಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಡಿ.30 ರಂದು ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳನ್ನು ನಿರ್ವಹಿಸಲಿದ್ದು, ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆ ಧಾಮ್ ಉದ್ಘಾಟನೆಯ ಜೊತೆಗೆ ಕಾರ್ಯನಿರ್ವಹಿಸಲಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರು-ಅಯೋಧ್ಯೆ ಮಾರ್ಗದ ಮೊದಲ ವಿಮಾನ ಜ.17 ರಂದು 8.05 ಕ್ಕೆ ಹೊರಟು 10.35 ಕ್ಕೆ ಅಯೋಧ್ಯೆಯಲ್ಲಿ ಇಳಿಯಲಿದೆ. ಅಯೋಧ್ಯೆಯಿಂದ 15.40ಕ್ಕೆ ಹೊರಡುವ ವಿಮಾನ 18.10ಕ್ಕೆ ಬೆಂಗಳೂರು ತಲುಪಲಿದೆ.
ಅಯೋಧ್ಯೆ-ಕೋಲ್ಕತಾ ಮಾರ್ಗದಲ್ಲಿ, ವಿಮಾನವು ಅಯೋಧ್ಯೆಯಿಂದ 11.05 ಕ್ಕೆ ಹೊರಟು 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ. ಕೊಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ 13.25ಕ್ಕೆ ಹೊರಟು 15.10 ಕ್ಕೆ ಅಯೋಧ್ಯೆಯನ್ನು ತಲುಪಲಿದೆ.