ಏರ್ ಇಂಡಿಯಾ ವಿಮಾನ ದುರಂತ: ಬ್ರಿಟಿಷ್ ಮಾಧ್ಯಮದ ವರದಿ ತಳ್ಳಿ ಹಾಕಿದ ಭಾರತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಬ್ರಿಟನ್ ನ (ಯುಕೆ) ಎರಡು ಕುಟುಂಬಗಳಿಗೆ ಬೇರೆಯವರ ಮೃತದೇಹ ನೀಡಲಾಗಿದೆ ಎಂಬ ಬ್ರಿಟಿಷ್ ಮಾಧ್ಯಮ ವರದಿಯನ್ನು ಭಾರತ ಬುಧವಾರ ತಳ್ಳಿಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಎಲ್ಲಾ ಮೃತದೇಹಗಳನ್ನು ಅತ್ಯಂತ ವೃತ್ತಿಪರತೆಯಿಂದ ಮತ್ತು ಮೃತರ ಘನತೆಗೆ ಧಕ್ಕೆಯಾಗದ ಹಾಗೆ ಗೌರವದಿಂದ ನಿರ್ವಹಿಸಲಾಗಿದೆ.ಬ್ರಿಟಿಷ್ ಮಾಧ್ಯಮಗಳ ವರದಿ ನೋಡಿದ್ದು, ಬ್ರಿಟನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲದೆ ದುರಂತದ ನಂತರ ಸಂಬಂಧಪಟ್ಟ ಅಧಿಕಾರಿಗಳು ಶಿಷ್ಟಾಚಾರ ಮತ್ತು ತಾಂತ್ರಿಕ ನೆರವಿನ ಮೂಲಕವೇ ಮೃತರ ಗುರುತು ಪತ್ತೆ ಮಾಡಿದ್ದಾರೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ವೈದ್ಯರ ವಸತಿ ಕಟ್ಟಡಕ್ಕೆ ಅಪ್ಪಳಿಸಿತ್ತು. ಪರಿಣಾಮ ಅದರಲ್ಲಿದ್ದ 241 ಪ್ರಯಾಣಿಕರು ಮತ್ತು ಅಪಘಾತಕ್ಕೀಡಾದ ಸ್ಥಳದಲ್ಲಿದ್ದ 19 ಜನರು ಸಾವನ್ನಪ್ಪಿದರು. ಒಬ್ಬ ಪ್ರಯಾಣಿಕ ಬದುಕುಳಿದಿದ್ದಾನೆ. ಮೃತರಲ್ಲಿ 53 ಮಂದಿ ಬ್ರಿಟಿಷ್ ಪ್ರಜೆಗಳೂ ಸೇರಿದ್ದಾರೆ.

ಮೃತದೇಹದ ಹಸ್ತಾಂತರ ವೇಳೆ ತಪ್ಪಾದ ಶವ ಕೊಡಲಾಗಿದೆ. ಇದರಿಂದ ಕುಟುಂಬಸ್ಥರು ಇನ್ನಷ್ಟು ನೋವನ್ನು ಅನುಭವಿಸುತ್ತಿದ್ದಾರೆ ಎಂಬ ಡೈಲ್ ಮೇಲ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!