ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಕರ್ನಾಟಕ ಮೂಲದ ಕೋ ಪೈಲಟ್ ಕ್ಲೈವ್ ಕುಂದರ್ ಮೃತಪಟ್ಟಿದ್ದಾರೆ.
ಕರಾವಳಿ ಮೂಲದವಾರದ ಕ್ಲೈವ್ ಕುಂದರ್ ಅವರು ಮುಂಬೈನಲ್ಲಿ ವಾಸವಿದ್ದರು. ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಲೈವ್ ಕುಂದರ್ ಅವರು ಪತನಗೊಂಡ ಏರ್ ಇಂಡಿಯಾದ AI-171 ವಿಮಾನದ ಕೋ ಪೈಲಟ್ ಆಗಿದ್ದರು.
ಈ ದುರಂತದಲ್ಲಿ 242 ಜನರು ಮೃತಪಟ್ಟಿದ್ದಾರೆ ಎಂದು ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಇಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದೇ ನಿಮಿಷಕ್ಕೆ ಈ ದುರಂತ ಸಂಭವಿಸಿದೆ.