ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನಿಷ್ಠ 265 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾದ ವಿಮಾನ ಅಪಘಾತದ ಬಗ್ಗೆ ತೀವ್ರ ಬೇಸರವಿದೆ. ಪರಿಹಾರ ಪ್ರಯತ್ನಕ್ಕೆ ಎಲ್ಲ ರೀತಿಯ ಬೆಂಬಲ ಕೊಡಲು ಸಿದ್ಧ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.
ನೀತಾ, ನಾನು ಹಾಗೂ ರಿಲಯನ್ಸ್ ನ ಸಂಪೂರ್ಣ ಕುಟುಂಬ ಬಹಳ ನೋವಿನಲ್ಲಿದೆ ಮತ್ತು ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಿಂದ ಆದ ಜೀವಹಾನಿಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ಈ ದುರಂತದಿಂದ ಭರಿಸಲಾರದ ನಷ್ಟಕ್ಕೆ ಗುರಿಯಾಗಿರುವ ಪ್ರತಿ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಹಾಗೂ ಹೃದಯಸ್ಪರ್ಶಿ ಸಂತಾಪ ಇದೆ.
ಇಂಥ ದುಃಖದ ಸನ್ನಿವೇಶದಲ್ಲಿ ರಿಲಯನ್ಸ್ ನಿಂದ ಸಂಪೂರ್ಣವಾದ ಬೆಂಬಲ ನೀಡಲಾಗುತ್ತದೆ. ಈಗ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಮಾರ್ಗದಲ್ಲಿಯೂ ನೆರವಾಗುತ್ತೇವೆ. ಓಂ ಶಾಂತಿ, ಎಂದು ಹೇಳಿದ್ದಾರೆ.
ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರದಂದು ಅಹಮದಾಬಾದ್ ನ ವೈದ್ಯಕೀಯ ಕಾಲೇಜು ಸಮುಚ್ಚಯದಲ್ಲಿ ಪತನವಾಗಿತ್ತು. ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಈ ದುರಂತ ಸಂಭವಿಸಿತ್ತು.