ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ತಿಂಗಳಲ್ಲಿ ಪೈಲಟ್ ಹುದ್ದೆಗಾಗಿ ಏರ್ ಇಂಡಿಯಾವು ಬರೋಬ್ಬರಿ 1,752 ಕ್ಕೂ ಹೆಚ್ಚು ಅರ್ಜಿ ಹಾಗೂ ಕ್ಯಾಬಿನ್ ಸಿಬ್ಬಂದಿಗಾಗಿ 72,೦೦೦ ಅರ್ಜಿಗಳನ್ನು ಸ್ವೀಕರಿಸಿದೆ.
ಕೇರಳದಲ್ಲಿ ಹೊಸ ಟೆಕ್ ಸೆಂಟರ್‌ಗಾಗಿ ವಿಮಾನಯಾನ ಸಂಸ್ಥೆ, ಡೆವಲಪರ್‌ಗಳು, ಆರ್ಕಿಟೆಕ್ಟ್‌ಗಳು, ಸೈಬರ್ ಸೆಕ್ಯುರಿಟಿ ವೃತ್ತಿಪರರು, ಪ್ರೋಗ್ರಾಂ ಮ್ಯಾನೇಜರ್‌ಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ 2,೦೦೦ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. 15 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆಯಲ್ಲದ ಪ್ರದೇಶಗಳಲ್ಲಿ ನೇಮಕಾತಿ ಮಾಡಿರಲ್ಲಿಲ್ಲ.
ವಾಣಿಜ್ಯ ಕಾರ್ಯಗಳು, ವ್ಯಾಪಾರ ಬೆಂಬಲ ಸೇವೆಗಳು ಮತ್ತು ಕಾರ್ಯಾಚರಣೆಗಳನ್ನು ಒಳಗೊಂಡಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತನ್ನ ಎಲ್ಲಾ ಕ್ಷೇತ್ರಗಳಲ್ಲಿ ತ್ವರಿತವಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.