ಏಕಕಾಲಕ್ಕೆ ರಜೆ ಹಾಕಿದ್ದ 25 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್‌ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅನಾರೋಗ್ಯದ ಕಾರಣ ನೀಡಿ ಸಾಮೂಹಿಕ ರಜೆ ಹಾಕಿದ್ದ ಕನಿಷ್ಠ 25 ಸಿಬ್ಬಂದಿಯನ್ನು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಜಾಗೊಳಿಸಿದೆ. 300 ಸಿಬ್ಬಂದಿ ರಜೆ ಹಾಕಿದ್ದರಿಂದ ನಿಲ್ದಾಣದಲ್ಲಿ ಸಮಸ್ಯೆ ಹೆಚ್ಚಾಗಿದ್ದು, ವಿಮಾನಗಳ ಹಾರಾಟ ರದ್ದಾಗಿತ್ತು.

ಏರ್‌ಲೈನ್‌ನ ಸುಮಾರು 300 ಉದ್ಯೋಗಿಗಳು ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಗೈರಾಗಿದ್ದರು. ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದು ದೊಡ್ಡ ಪ್ರಮಾಣದ ವಿಮಾನಯಾನ ಅಡೆತಡೆಗಳಿಗೆ ಕಾರಣವಾಯಿತು. ಇದರಿಂದಾಗಿ ಯಾವುದೇ ಸಮರ್ಥನೀಯ ಕಾರಣವಿಲ್ಲದೆ ರಜೆ ಹಾಕಿರುವ 25 ಸಿಬ್ಬಂದಿಯನ್ನು ಏರ್‌ಲೈನ್ಸ್‌ ವಜಾಗೊಳಿಸಿದೆ.

ಸಿಬ್ಬಂದಿ ಸಾಮೂಹಿಕ ರಜೆಯಿಂದ 76 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇದರಿಂದ ಸಾಕಷ್ಟು ಸಮಸ್ಯೆಯಾಗಿತ್ತು. ವಜಾಗೊಳ್ಳುವ ಸಿಬ್ಬಂದಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮ್ಯಾನೇಜ್‌ಮೆಂಟ್ ಇಂದು ಕ್ಯಾಬಿನ್ ಸಿಬ್ಬಂದಿ ಸದಸ್ಯರೊಂದಿಗೆ ಟೌನ್‌ಹಾಲ್ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!