ಯಲಹಂಕದಲ್ಲಿ ಏರ್ ಶೋ: ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಕೆಗೆ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿಯಲ್ಲಿ ‘ಏರ್ ಶೋ-2023’ ನಡೆಯಲಿದೆ. ಈ ಪ್ರಯುಕ್ತ ವಾಯುಸೇನಾ ನೆಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಅಳವಡಿಸಲಾದ ಕ್ರೇನ್ ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ಬೆಂಗಳೂರು ಯಲಹಂಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನ 2023 (Air show 202 ಫೆಬ್ರವರಿ 13ರಿಂದ 17ರವರೆಗೆ ನಡೆಯಲಿದೆ. ಈ ವೇಳೆ ಅನೇಕ ಯುದ್ಧ ವಿಮಾನಗಳು ಕಡಿಮೆ ಎತ್ತರದ ಅಂತರದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತವೆ.

ಹೀಗಾಗಿ ವಾಯುಸೇನಾ ನೆಲೆಯ ಸುತ್ತಮುತ್ತಲಿನ ಐದು ಕಿಲೋ ಮೀಟರ್ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಬೃಹತ್ ಕಟ್ಟಡಗಳ ಮಾಲೀಕರಿಗೆ ಈ ಸೂಚನೆ ನೀಡಲಾಗಿದೆ. ನಿರ್ಮಾಣ ಗೊಳುತ್ತಿರುವ ಕಟ್ಟಡಗಳಲ್ಲಿನ ಕ್ರೇನ್‌ಗಳ ಎತ್ತರವನ್ನು ಫೆಬ್ರುವರಿ 09ರಿಂದ ಫೆಬ್ರುವರಿ 17ರವರೆಗೆ ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು/ಮಾಲಿಕರು/ಅಭಿವೃದ್ಧಿದಾರರಿಗೆ ಬಿಬಿಎಂಪಿ ತಿಳಿಸಿದೆ.

ಆದೇಶ ಉಲ್ಲಂಘಿಸಿದ್ದೇ ಆದಲ್ಲಿ ‘ಬಿಬಿಎಂಪಿ ಕಾಯ್ದೆ 2020’ ಮತ್ತು ‘ಭಾರತೀಯ ಏರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91’ ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಯೋಜನೆಯ ಜಂಟಿ ನಿರ್ದೇಶಕರು (ಉತ್ತರ) ಮಂಜೇಶ್ ಅವರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!