ವಾಯುಪಡೆ SDI ಮುಖ್ಯಸ್ಥರಾಗಿ ಕನ್ನಡಿಗ ಕೆ.ಎನ್. ಸಂತೋಷ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ವಾಯುಪಡೆಯ ಬೆಂಗಳೂರು ವಿಭಾಗದ ಸಾಫ್ಟ್ವೇರ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ (SDI)ನ ಮುಖ್ಯಸ್ಥರಾಗಿ ಕನ್ನಡಿಗ ಏರ್ ವೈಸ್ ಮಾರ್ಷಲ್ ಕೆ.ಎನ್. ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ.

ಏರ್​ ವೈಸ್ ಮಾರ್ಶಲ್​ ಕೆ.ಎನ್​.ಸಂತೋಷ್ ಅವರು ಮಂಡ್ಯದ ಪಿಇಎಸ್​ ಎಂಜಿನಿಯರ್​ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್​ ವ್ಯಾಸಂಗ ಮಾಡಿದ್ದಾರೆ. ಡಿಫೆನ್ಸ್​ ಸರ್ವಿಸ್​ ಕಾಲೇಜಿನ ಹಳೇ ವಿದ್ಯಾರ್ಥಿ. ಆಪರೇಶನಲ್​ ಮ್ಯಾನೇಜ್​ಮೆಂಟ್​​ ಮತ್ತು ಡಿಫೆನ್ಸ್​ ಸ್ಟಡೀಸ್​​ನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅವರು ಏರ್​ಫೋರ್ಸ್​​ನ ಸಾಫ್ಟ್​ವೇರ್ ಡೆವಲಪ್​ಮೆಂಟ್ ಇನ್​ಸ್ಟಿಟ್ಯೂಟ್​​ನಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಮೂರು ದಶಕಗಳಿಂದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂತೋಷ್, 2005ರಲ್ಲಿ ವಿಶಿಷ್ಟ ಸೇವಾ ಪದಕ ಗೌರವ ಪಡೆದಿದ್ದಾರೆ. 2017ರಲ್ಲಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಡಾ.ವಿ.ಎಂ.ಘಾಟ್ಗೆ ಪ್ರಶಸ್ತಿ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!