ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟ ನಟಿಯರು ಭಾಗಿಯಾಗುತ್ತಿದ್ದು ಖ್ಯಾತ ನಟ- ನಟಿಯರ ಫೋಟೋಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
78ನೇ ಅಂತಾರಾಷ್ಟ್ರೀಯ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಬಾಲಿವುಡ್ ಫೇಮಸ್ ಬೆಡಗಿ ನಟಿ ಐಶ್ಚರ್ಯಾ ರೈ ಅವರು ಕೂಡ ಆಗಮಿಸಿದ್ದು, ಇವರ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ನಟಿ ಐಶ್ವರ್ಯ ರೈ ಅವರು ಇತ್ತೀಚೆಗಷ್ಟೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಐವರಿ ಸೀರೆ ಧರಿಸಿ ಹಣೆಗೆ ಸಿಂಧೂರವಿಟ್ಟು ಮಿಂಚಿದ್ದರು. ಬಳಿಕ ಭಗವದ್ಗೀತೆ ಶ್ಲೋಕವಿರುವ ಗೌನ್‌ನಲ್ಲಿ ನಟಿ ಕಂಗೊಳಿಸಿದ್ದಾರೆ.
ನಟಿ ಐಶ್ವರ್ಯಾ ರೈ ಕಪ್ಪು ಬಣ್ಣದ ಗೌನ್ ಧರಿಸಿದ್ದು ಹಳೆಯ ಕಾಲದ ರಾಜಕುಮಾರಿಯಂತೆ ಗ್ಲಾಮರಸ್ ಆಗಿ ಕಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ನಟಿ ಐಶ್ವರ್ಯ ರೈ ಬರುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆಯ ಮೂಲಕ ಸ್ವಾಗತಿಸಿ ಬರ ಮಾಡಿಕೊಂಡರು.
ನಟಿ ಐಶ್ವರ್ಯ ರೈ ಅವರು ಕಪ್ಪು ಬಣ್ಣದ ಸೀಕ್ವಿನ್ಡ್ ಗೌನ್‌ನಲ್ಲಿ ಪ್ರಿನ್ಸೆಸ್ ನಂತೆ ಕಂಡಿದ್ದಾರೆ. ಈ ಗೌನ್ ಮೇಲ್ಗಡೆಗೆ ಬೃಹತ್ ಶಾಲ್ ಒಂದನ್ನು ಸ್ಟೈಲಾಗಿ ಹಾಕಿಕೊಂಡಿದ್ದು ಅವರ ನೋಟ ನೋಡುಗರ ಗಮನ ಸೆಳೆಯುವಂತೆ ಮಾಡಿದೆ.
ಕಾನ್ಸ್‌ನಲ್ಲಿ ಲೋರಿಯಲ್ ಪ್ಯಾರಿಸ್ ರಾಯಭಾರಿಯಾಗಿ ನಟಿ ಐಶ್ವರ್ಯ ರೈ ಭಾಗವಹಿಸಿದ್ದರು. ನಟಿ ಐಶ್ವರ್ಯ ರೈ ಜೊತೆಗೆ ಡೇಮ್ ಹೆಲೆನ್ ಮಿರ್ರೆನ್ ಮತ್ತು ಕಾರಾ ಡೆಲೆವಿಂಗ್ನೆ ಕೂಡ ರೆಡ್ ಕಾರ್ಪೆಟ್ ಮೇಲೆ ಹಾಜರಿದ್ದ ಫೋಟೊ ಕೂಡ ವೈರಲ್ ಆಗಿದೆ.