ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಬಿರುಗಾಳಿ ಬಿಸಿದ್ದು, ಎನ್‌ಸಿಪಿ ನಾಯಕ ಅಜಿತ್ ಪವಾರ್ ಹಾಗೂ ಸಚಿವರು ಬಿಜೆಪಿ-ಶಿವಸೇನೆ ಸರ್ಕಾರ ಸೇರಿಕೊಂಡಿದ್ದಾರೆ.
9 ಶಾಸಕರ ಜೊತೆ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಅಜಿತ್ ಪವಾರ್ ಸೇರಿಕೊಂಡಿದ್ದು, ಈ ಶಾಕ್‌ನಿಂದ ಎನ್‌ಸಿಬಿ ಹೊರಬರುವ ಮುನ್ನವೇ ಮತ್ತೊಂದು ಶಾಕ್ ನೀಡಲಾಗಿದೆ. ಎನ್‌ಸಿಪಿ ಪಕ್ಷದ ಹೆಸರು ಹಾಗೂ ಚಿಹ್ನೆ ನಮ್ಮದು ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಎನ್‌ಸಿಪಿ ಪಾರ್ಟಿ ನಮ್ಮದು. ಈ ಪಾರ್ಟಿ ಅಡಿಯಲ್ಲೇ ನಾವು ಬಿಜೆಪಿ ಹಾಗೂ ಶಿವಸೇನೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದೇವೆ. ಎನ್‌ಸಿಪಿ ಪಕ್ಷ ಹಾಗೂ ಎನ್‌ಸಿಪಿ ಚಿಹ್ನೆ ಅಡಿಯಲ್ಲೇ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದೇವೆ. ಹೀಗಾಗಿ ಎನ್‌ಸಿಪಿ ಪಾರ್ಟಿ ನಮ್ಮದು ಎಂದು ಅಜಿತ್ ಪವಾರ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾವು ಎನ್‌ಸಿಪಿ ಚಿಹ್ನೆ ಅಡಿಯಲ್ಲೇ ಸ್ಪರ್ಧಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಇತ್ತೀಚೆಗೆ ಏಕನಾಥ್ ಶಿಂಧೆ ಬಣ ಇದೀ ರೀತಿ ವಾದ ಮುಂದಿಟ್ಟಿತ್ತು. ಶಿವಸೇನೆ ಹೆಸರು ಹಾಗೂ ಚಿಹ್ನೆ ತಮ್ಮದು ಎಂದು ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ದಿನಗಳ ಹೋರಾಟದ ನಡುವೆ ಚನಾವಣಾ ಆಯೋಗ ಶಿಂಧೆ ಬಣಕ್ಕೆ ಚಿಹ್ನೆ ಹಾಗೂ ಹೆಸರು ನೀಡಿತ್ತು. ಇದೀಗ ಇದೇ ಪರಿಸ್ಥಿತಿ ಎನ್‌ಸಿಪಿಗೆ ಎದುರಾಗುವ ಸಾಧ್ಯತೆ ಇದೆ.