ಅಜಿತ್ ಪವಾರ್ ಪ್ರಮಾಣ ವಚನದಲ್ಲಿ ಭಾಗಿ: ಪಕ್ಷದಿಂದ ಮೂವರನ್ನು ಉಚ್ಚಾಟಿಸಿದ ಶರದ್ ಪವಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ (Maharashtra) ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ (Ajit Pawar) ಪ್ರಮಾಣ ವಚನ ಸ್ವೀಕರಿಸಿದ್ದು, ಈ ವೇಳೆ ಸಮಾರಂಭದಲ್ಲಿ ಭಾಗವಹಿಸಿದ್ದ ತಮ್ಮ ಸೋದರಳಿಯ ಸಹಿತ ಪಕ್ಷದ ಮೂವರು ನಾಯಕರನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಉಚ್ಚಾಟಿಸಿದ್ದಾರೆ.

ಈ ವೇಳೆ ಪಕ್ಷಾಂತರಕ್ಕಾಗಿ ರಹಸ್ಯವಾಗಿ ಕೆಲಸ ಮಾಡಿ ಆರೋಪದಲ್ಲಿ ಸಂಸದರಾದ ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಅವರನ್ನು ಅನರ್ಹಗೊಳಿಸಬೇಕೆಂದು ಪಕ್ಷದ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ.

ಮುಂಬೈ ವಿಭಾಗೀಯ ಎನ್‌ಸಿಪಿ ಮುಖ್ಯಸ್ಥ ನರೇಂದ್ರ ರಾಥೋಡ್, ಅಕೋಲಾ ನಗರ ಜಿಲ್ಲಾ ಮುಖ್ಯಸ್ಥ ವಿಜಯ್ ದೇಶಮುಖ್ ಮತ್ತು ರಾಜ್ಯ ಸಚಿವ ಶಿವಾಜಿರಾವ್ ಗರ್ಜೆ ಅವರನ್ನು ಉಚ್ಚಾಟಿಸಲಾಗಿದ್ದು, ಮೂವರೂ ಅಜಿತ್ ಪವಾರ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಎನ್‌ಸಿಪಿಯ ಇಬ್ಬರು ಸಂಸದರಾದ ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಅವರು ನಮ್ಮ ಸಂವಿಧಾನ, ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. 9 ಶಾಸಕರ ಪ್ರಮಾಣ ವಚನ ಸಮಾರಂಭವನ್ನು ಸುಗಮಗೊಳಿಸುವ ಮತ್ತು ಮುನ್ನಡೆಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ತಿಳಿಸಲು ನಾನು ನಿಮಗೆ ಅತ್ಯಂತ ತುರ್ತಾಗಿ ಪತ್ರ ಬರೆಯುತ್ತಿದ್ದೇನೆ ಎಂಜು ಸುಳೆ ಅವರು ಶರದ್ ಪವಾರ್ ಅವರಿಗೆ ಪತ್ರ ಬರೆದಿದ್ದಾರೆ.

ಪಕ್ಷದ ಅಧ್ಯಕ್ಷರ ತಿಳುವಳಿಕೆ ಅಥವಾ ಒಪ್ಪಿಗೆಯಿಲ್ಲದೆ ಈ ಪಕ್ಷಾಂತರಗಳನ್ನು ರಹಸ್ಯವಾಗಿ ನಡೆಸಲಾಗಿದೆ, ಇದಕ್ಕಾಗಿ ಅನರ್ಹ ಮಾಡಬೇಕು. ಇಲ್ಲಿ ಹೇಳಲಾದ ಸಂಸದರು ಇನ್ನು ಮುಂದೆ NCP ಯ ಗುರಿಗಳು ಮತ್ತು ಸಿದ್ಧಾಂತದೊಂದಿಗೆ ಹೋಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸುಳೆ ಹೇಳಿದ್ದಾರೆ.

ಎನ್‌ಸಿಪಿಯ ಶಿಸ್ತು ಸಮಿತಿಯು ಅಜಿತ್ ಪವಾರ್ ಆಡಳಿತಾರೂಢ ಶಿವಸೇನೆ-ಬಿಜೆಪಿ ಮೈತ್ರಿಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳಲು ಅಜಿತ್ ಪವಾರ್ ಅವರನ್ನು ಬೆಂಬಲಿಸಿದ 9 ಶಾಸಕರನ್ನು ಅನರ್ಹಗೊಳಿಸುವಂತೆ ಕರೆ ನೀಡಿದೆ. 9 ಶಾಸಕರನ್ನು ತಕ್ಷಣ ಅನರ್ಹಗೊಳಿಸಬೇಕು. ಅವರನ್ನು ಸದಸ್ಯರಾಗಿ ಮುಂದುವರಿಯಲು ಅವಕಾಶ ನೀಡಿದರೆ, ಅವರು ಪಕ್ಷದ ಹಿತಾಸಕ್ತಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುವುದನ್ನು ಮುಂದುವರೆಸುವ ನಿಜವಾದ ಸಾಧ್ಯತೆಯಿದೆ ಎಂದು ಎನ್‌ಸಿಪಿಯ ಶಿಸ್ತು ಸಮಿತಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!