ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕಾಶ ಏರ್‌ವೇಸ್‌ನ ಮೊದಲ ವಾಣಿಜ್ಯ ವಿಮಾನ ಸೇವೆ ಇಂದು ಆರಂಭವಾಗಿದೆ. ಮೊದಲ ವಾಣಿಜ್ಯ ವಿಮಾನ ಬೋಯಿಂಗ್ 737 ಮ್ಯಾಕ್ಸ್ ಮುಂಬೈನಿಂದ ಅಹಮದಾಬಾದ್‌ಗೆ ಪ್ರಯಾಣಿಕರೊಂದಿಗೆ ಹೊರಟಿತು. ಈ ಸೇವೆಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ರಾಜ್ಯ ಸಚಿವ ವಿಜಯ್ ಕುಮಾರ್ ಸಿಂಗ್ ಉದ್ಘಾಟಿಸಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಆಕಾಶ ಏರ್ ವಿಮಾನಗಳ ಟಿಕೆಟ್ ಬುಕಿಂಗ್ ಅನ್ನು ಕೆಲವು ದಿನಗಳ ಹಿಂದೆ ಪ್ರಾರಂಭಿಸಲಾಗಿದೆ. ಬೆಂಗಳೂರು ಮತ್ತು ಕೊಚ್ಚಿ ನಡುವೆ ಆಗಸ್ಟ್ 13 ರಿಂದ ವಿಮಾನ ಸೇವೆ ಆರಂಭವಾಗಲಿದೆ. ಇವುಗಳ ಬುಕ್ಕಿಂಗ್ ಈಗಾಗಲೇ ಶುರುವಾಗಿದ್ದು, www.akasaair.com ವೆಬ್‌ಸೈಟ್ ಅಥವಾ ಆಕಾಶ ಏರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
Presenting a new airline to India 🇮🇳 @AkasaAir
Live inauguration: https://t.co/dv8pWJ24pT
— Jyotiraditya M. Scindia (@JM_Scindia) August 7, 2022
ಆಕಾಶ ಏರ್ ಕಳೆದ ವರ್ಷ ಬೋಯಿಂಗ್ 737 ಮ್ಯಾಕ್ಸ್ ವಿಮಾನಕ್ಕೆ ಆರ್ಡರ್ ಮಾಡಿತ್ತು. ಕಂಪನಿಯು ವಾಣಿಜ್ಯ ಸೇವೆಗಳಿಗಾಗಿ ಹೆಚ್ಚಿನ ಸಿಬ್ಬಂದಿ ನೇಮಕಾತಿಯನ್ನು ಮಾಡಿಕೊಂಡಿದೆ. ವಿಮಾನ ಸೇವೆಗಳನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ತಿಳಿಸಿದ ಸಂಸ್ಥೆ ಕೆಲವೇ ತಿಂಗಳುಗಳಲ್ಲಿ ದೇಶದ ಹೆಚ್ಚಿನ ನಗರಗಳ ನಡುವೆ ಆಕಾಶ ಏರ್ ಸೇವೆಗಳು ಲಭ್ಯವಾಗಲಿವೆ.