ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಸೀತಾ ಎಂಬ ಹುಲಿಯನ್ನು ಅಕ್ಬರ್ ಎಂಬ ಹುಲಿಯೊಂದಿಗೆ ಇರಿಸಲು ಭಾರಿ ವಿರೋಧ ವ್ಯಕ್ತವಾಗಿದೆ. ಸಿಲಿಗುರಿ ಸಫಾರಿ ಪಾರ್ಕ್‌ನಲ್ಲಿಅರಣ್ಯ ಸಿಬ್ಬಂದಿ, ಅಕ್ಬರ್ ಮತ್ತು ಸೀತಾ ಎಂಬ ಎರಡು ಹುಲಿಗಳನ್ನು ಒಟ್ಟಿಗೆ ಇರಿಸಿದ್ದರು. ಇದನ್ನು ವಿಶ್ವ ಹಿಂದೂ ಪರಿಷತ್ ನಿರಾಕರಿಸಿ ಕೊಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿದೆ.
ಕಳೆದ ವರ್ಷ ಫೆಬ್ರವರಿ 13 ರಂದು ತ್ರಿಪುರಾದ ಸೆಫಾಯಿಜಾಲಾ ಪಾರ್ಕ್‌ನಿಂದ ಸಿಲಿಗುರಿ ಸಫಾರಿ ಪಾರ್ಕ್‌ಗೆ ಹುಲಿಯನ್ನು ತರಲಾಗಿತ್ತು. ಅರಣ್ಯ ಇಲಾಖೆ ಈ ಎರಡು ಹುಲಿಗಳನ್ನು ಒಟ್ಟಿಗೆ ಇರಿಸಿದೆ. ಇದೀಗ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸೀತಾ ಹೆಸರಿನ ಹುಲಿಯನ್ನು ಅಕ್ಬರ್ ಹೆಸರಿನ ಹುಲಿ ಜೊತೆಗೆ ಇರಿಸುವುದು ಹಿಂದೂ ಧರ್ಮಕ್ಕೆ ಅಪಮಾನ. ಹೀಗಾಗಿ ಹುಲಿಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಆದರೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಅಧಿಕಾರಿಗಳು, ಸಫಾರಿ ಪಾರ್ಕ್ ಅಧಿಕಾರಿಗಳು ಹುಲಿಗಳಿಗೆ ಹೊಸದಾಗಿ ನಾಮಕರಣ ಮಾಡಲ್ಲ ಎನ್ನುತ್ತಿದ್ದಾರೆ.