ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ನ್ಯೂ ಪಡುವಿಗೆ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ.
ಈ ಬಗ್ಗೆ ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್. ಅವರು ಹೊರಡಿಸಿರುವ ಆದೇಶ ಪತ್ರ ಹಾಜಬ್ಬರ ಕೈಸೇರಿದ್ದು, ಅಕ್ಷರ ಸಂತನ ಬಹುಕಾಲದ ಮತ್ತೊಂದು ಕನಸು ನನಸಾಗಿದೆ.
ಕಳೆದ ಹಲವು ವರ್ಷಗಳಿಂದ ಹಾಜಬ್ಬ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳ ಬೆನ್ನ ಹಿಂದೆ ಬಿದ್ದು ನೆಸಿದ ಪ್ರಯತ್ನ ಸಾಮಾನ್ಯವೇನಲ್ಲ. ಛಲ ಬಿಡದ ಭಗೀರಥನಂತೆ ಅವರು ಈ ಕಾಲೇಜಿಗಾಗಿ ಶ್ರಮ ವಹಿಸಿದ್ದಾರೆ. ಪ್ರತೀ ಅಭಿನಂದನೆ, ಸನ್ಮಾನ ಸಮಾರಮಭಗಳಲ್ಲಿಯೂ ತನಗೊಂದು ’ಪದವಿ ಪೂರ್ವ ಕಾಲೇಜು ಕೊಟ್ಟು ಬಿಡಿ… ಎನ್ನದೆ ಅವರ ಮಾತು ಮುಕ್ತಾಯವಾಗುತ್ತಿರಲಿಲ್ಲ. ಇದೀಗ ಹಾಜಬ್ಬರ ಮನವಿಗೆ ಕೊನೆಗೂ ರಾಜ್ಯ ಸರಕಾರ ಸ್ಪಂದಿಸಿದೆ. ನ್ಯೂಪಡುವಿನಲ್ಲಿನ ಅಕ್ಷರ ದೇಗುಲಕ್ಕೆ ಇನ್ನಷ್ಟು ಕಳೆ ಬರಲಿದೆ.
‘ಕಿತ್ತಳೆ ಬುಟ್ಟಿಯಲ್ಲಿ ಅಕ್ಷರದ ಕನಸು’ ಎಂಬ ವರದಿಯ ಮೂಲಕ ಹೊಸದಿಗಂತ ಮೊದಲ ಬಾರಿಗೆ ಹಾಜಬ್ಬರನ್ನು ನಾಡಿಗೆ ಪರಿಚಯಿಸಿತ್ತು.