ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಷ್ಣುಮಂಚು ಅಭಿನಯದ ಕಣ್ಣಪ್ಪ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಿದೆ ಈ ಚಿತ್ರದಲ್ಲಿ ಹಲವು ಭಾಷೆಯ ವಿವಿಧ ಖ್ಯಾತ ಕಲಾವಿದರು ನಟಿಸಿದ್ದಾರೆ. ಅದರಲ್ಲಿ ಅಕ್ಷಯ್ ಕುಮಾರ್ ಕೂಡ ಅತಿಥಿ ಪಾತ್ರದಲ್ಲಿ ಇದ್ದಾರೆ.
ಗೆಸ್ಟ್ ಅಪೀಯರೆನ್ಸ್ ಮಾಡಿದ್ದ ಬೇರೆ ಭಾಷೆ ಕಲಾವಿದರು ಉಚಿತವಾಗಿಯೇ ಅಭಿನಯಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಅಕ್ಷಯ್ ಕುಮಾರ್ ಶಿವನ ಪಾತ್ರಕ್ಕಾಗಿ 10 ಕೋಟಿ ರೂ. ಸಂಭಾವನೆ ಪಡೆದು ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶಿವನ ಪಾತ್ರ ಮಾಡಿದ್ದ ಅಕ್ಷಯ್ ಕುಮಾರ್ 5 ದಿನದ ಕಾಲ್‌ಶೀಟ್‌ಗಾಗಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. ಆದರೆ ಪ್ರಭಾಸ್ ಹಾಗೂ ಮೋಹನ್‌ಲಾಲ್ ಮೋಹನ್‌ಬಾಬು ಮೇಲಿನ ಸ್ನೇಹ, ವಿಶ್ವಾಸದಿಂದ ರೆಮನ್ಯುರೇಶನ್ ಪಡೆಯದೇ ಅಭಿನಯಿಸಿದ್ದಾರೆ. ಆದರೆ ಐದೇ ದಿನದ ಕಾಲ್‌ಶೀಟ್‌ಗೆ ಅಕ್ಷಯ್ 10 ಕೋಟಿ ಪಡೆದುಕೊಂಡು ಹೋಗಿರುವುದು ಟಾಲಿವುಡ್ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ.