ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಷಯ್ ಕುಮಾರ್ ನಟನೆಯ ಒಎಮ್‌ಜಿ-1 ಸಿನಿಮಾ ಬಿಗ್ ಹಿಟ್ ಆಗಿತ್ತು. ಇದೇ ಭರವಸೆಯಲ್ಲಿ ಒಎಮ್‌ಜಿ-2 ಸಿನಿಮಾ ತಯಾರಾಗಿದ್ದು, ಸೆನ್ಸಾರ್ ಮಂಡಳಿಯಲ್ಲಿ ಸಿನಿಮಾ ಎ ಸರ್ಟಿಫಿಕೇಟ್ ಪಡೆದಿದೆ.
ಸೆನ್ಸಾರ್ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದ್ದು, ಬರೋಬ್ಬರಿ 20 ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ಇದರಿಂದಾಗಿ ಸಿನಿಮಾ ಬಗ್ಗೆ ಕೊಂಚ ನೆಗೆಟಿವ್ ಇಂಪ್ರೆಶನ್ ಬರುವ ಸಾಧ್ಯತೆಗಳಿವೆ, ಕುಟುಂಬ ಸಮೇತರಾಗಿ ಸಿನಿಮಾ ನೋಡೋದಕ್ಕೆ ಸಾಧ್ಯವಾಗದ ಕಾರಣ ಕಲೆಕ್ಷನ್ ತಗ್ಗುವ ಸಾಧ್ಯತೆಗಳಿವೆ. ಲೈಂಗಿಕ ಶಿಕ್ಷಣದ ಬಗೆಗಿನ ಸಿನಿಮಾ ಇದಾಗಿದ್ದು, ಈಗಾಗಲೇ ಸಾಕಷ್ಟು ವಿರೋಧಗಳನ್ನು ಎದುರಿಸಿದೆ. ಈ ಸಿನಿಮಾ ಜನರಿಗೆ ಇಷ್ಟವಾಗುತ್ತದೋ ಇಲ್ಲವೋ ನೋಡಬೇಕಿದೆ.