ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಹೊಸ ಗೊಂದಲ ಸೃಷ್ಟಿಯಾಗಿದೆ. ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ ಎನ್ನಲಾಗಿದ್ದ ಈ ಚಿತ್ರ ಇದೀಗ ಜೂನ್ ತಿಂಗಳಿಗೆ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂಬ ವರದಿಗಳು ಕೇಳಿಬಂದಿವೆ.
‘ಆರ್‌ಆರ್‌ಆರ್’ ಬಳಿಕ ‘ಗೇಮ್ ಚೇಂಜರ್’ ಮತ್ತು ‘ಆಚಾರ್ಯ’ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ರಾಮ್ ಚರಣ್ ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡಲು ನಿರೀಕ್ಷೆ ಇಟ್ಟಿದ್ದಾರೆ. ಮೂಲತಃ ‘ಪೆದ್ದಿ’ ಚಿತ್ರವನ್ನು ಮಾರ್ಚ್ ಅಂತ್ಯದಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆಯ ಕಾರಣದಿಂದ ದಿನಾಂಕವನ್ನು ಏಪ್ರಿಲ್‌ಗೆ ಸರಿಸಲಾಗಿತ್ತು.
ಇದನ್ನೂ ಓದಿ:
ಇತ್ತೀಚೆಗೆ ನಿರ್ಮಾಪಕ ಎಸ್‌ಕೆಎನ್ ಹೇಳಿಕೆ ನೀಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ತಮ್ಮ ‘ಚೆನ್ನೈ ಲವ್ ಸ್ಟೋರಿ’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ 26ರಂದು ‘ಪೆದ್ದಿ’ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ತಮ್ಮ ಚಿತ್ರದ ದಿನಾಂಕ ಬದಲಾಯಿಸಿದ್ದಾಗಿ ತಿಳಿಸಿದ್ದಾರೆ.
ಇದರಿಂದ ‘ಪೆದ್ದಿ’ ಬಿಡುಗಡೆ ಮತ್ತೆ ಮುಂದೂಡಿಕೆಯಾಗಿದೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇತ್ತೀಚೆಗೆ ಚಿತ್ರೀಕರಣದ ವೇಳೆ ರಾಮ್ ಚರಣ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದರು. ಇದೂ ಸಹ ವಿಳಂಬಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಗ್ರಾಮೀಣ ಹಿನ್ನೆಲೆಯ ಈ ಚಿತ್ರದಲ್ಲಿ ರಾಮ್ ಚರಣ್ ಕ್ರಿಕೆಟ್ ಆಟಗಾರ ಮತ್ತು ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಶಿವ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಜಾನ್ಹವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶನವನ್ನು ಬುಚ್ಚಿಬಾಬು ಸನಾ ಮಾಡುತ್ತಿದ್ದಾರೆ.



