Wednesday, October 29, 2025

ಅಲ್ಬೇನಿಯಾದ AI-ನಿರ್ಮಿತ ಸಚಿವೆ ಡಿಯೆಲ್ಲಾ 83 ಮಕ್ಕಳ ಗರ್ಭಿಣಿ: ಪ್ರಧಾನಿಯ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಲ್ಬೇನಿಯಾದ AI-ನಿರ್ಮಿತ ಸಚಿವೆ ಡಿಯೆಲ್ಲಾ ಗರ್ಭಿಣಿ ಎಂದು ಪ್ರಧಾನಿ ಎಡಿ ರಾಮ ಘೋಷಿಸಿದ್ದಾರೆ.

ಇಂದು ನಾವು ಡಿಯೆಲ್ಲಾ ವಿಚಾರವಾಗಿ ರಿಸ್ಕ್‌ ತೆಗೆದುಕೊಂಡಿದ್ದೇವೆ. ಮೊದಲ ಬಾರಿಗೆ ಡಿಯೆಲ್ಲಾ ಗರ್ಭಿಣಿಯಾಗಿದ್ದು, 83 ಮಕ್ಕಳ ತಾಯಿಯಾಗಲಿದ್ದಾರೆ. ಮಕ್ಕಳು ಅಥವಾ ಸಹಾಯಕರು, ಸಂಸತ್ತಿನಲ್ಲಿ ನಡೆಯುವ ಎಲ್ಲವನ್ನೂ ದಾಖಲಿಸಲಿದ್ದಾರೆ ಎಂದು ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್‌ ಡೈಲಾಗ್‌ನಲ್ಲಿ ಪ್ರಧಾನಿ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ಸಂಸತ್ತಿನ ಅಧಿವೇಶನಗಳಲ್ಲಿ ಭಾಗವಹಿಸುವವರಿಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಾರೆ. ಸಂಸತ್‌ನಲ್ಲಿ ನಡೆಯುವ ಎಲ್ಲದರ ದಾಖಲೆಯನ್ನು ಇಟ್ಟುಕೊಳ್ಳುತ್ತಾರೆ. ಈ ಮಕ್ಕಳು ತಮ್ಮ ತಾಯಿಯ ಜ್ಞಾನವನ್ನು ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.2026 ರ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

‘ಉದಾಹರಣೆಗೆ, ನೀವು ಕಾಫಿ ಕುಡಿಯಲು ಹೋಗಿ ಸದನಕ್ಕೆ ಹಿಂತಿರುಗಲು ಮರೆತರೆ, ಈ ಮಗು ನೀವು ಸಭಾಂಗಣದಲ್ಲಿ ಇಲ್ಲದಿದ್ದರೂ, ಏನು ಹೇಳಬೇಕೆಂದಿರುತ್ತೀರಿ ಅದನ್ನು ಹೇಳುತ್ತದೆ. ನೀವು ಯಾರ ಮೇಲೆ ಪ್ರತಿದಾಳಿ ಮಾಡಬೇಕೆಂದು ಹೇಳುತ್ತದೆ ಎಂದು ಎಐ ಸಹಾಯಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಅಲ್ಬೇನಿಯಾದ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸಲು ಡಿಯೆಲ್ಲಾ (ಸೂರ್ಯ ಎಂದರ್ಥ) ಅವರನ್ನು ಸೆಪ್ಟೆಂಬರ್‌ನಲ್ಲಿ ನೇಮಿಸಲಾಯಿತು. ಇ-ಅಲ್ಬೇನಿಯಾ ವೇದಿಕೆಯಲ್ಲಿ ಜನವರಿಯಲ್ಲಿ ಮೊದಲು ವರ್ಚುವಲ್ ಸಹಾಯಕರಾಗಿ ಪ್ರಾರಂಭಿಸಲಾಯಿತು. ನಾಗರಿಕರು ಮತ್ತು ವ್ಯವಹಾರಗಳು ರಾಜ್ಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ.

error: Content is protected !!