March 10, 2026
Tuesday, March 10, 2026
spot_img

ಕಾಂಗರೂ ಪಡೆಯ ಸದ್ದಡಗಿಸಿದ ಟೀಮ್ ಇಂಡಿಯಾ: ಮೊದಲ ಟಿ20ಯಲ್ಲಿ ಭಾರತಕ್ಕೆ ಶುಭಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಟಿ20 ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಅಮೋಘ ಪ್ರದರ್ಶನ ನೀಡಿದೆ. ಬೌಲಿಂಗ್‌ನಲ್ಲಿ ಅರುಂಧತಿ ರೆಡ್ಡಿ ಅಬ್ಬರ ಹಾಗೂ ಬ್ಯಾಟಿಂಗ್‌ನಲ್ಲಿ ಶಫಾಲಿ ವರ್ಮಾ ಅವರ ಸ್ಫೋಟಕ ಆಟದ ನೆರವಿನಿಂದ ಭಾರತ, ಡಕ್ವರ್ಥ್ ಲೂಯಿಸ್ (DLS) ನಿಯಮದನ್ವಯ 21 ರನ್‌ಗಳ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ಕೇವಲ 133 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಂಡಿತು.

ಗುರಿ ಬೆನ್ನಟ್ಟಿದ ಭಾರತ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಶಫಾಲಿ ವರ್ಮಾ ಕೇವಲ 11 ಎಸೆತಗಳಲ್ಲಿ 21 ರನ್ (1 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ಸ್ಮೃತಿ ಮಂದನಾ (16) ಮತ್ತು ಜೆಮಿಮಾ ರೋಡಿಗ್ರಸ್ (9) ಕ್ರೀಸ್‌ನಲ್ಲಿದ್ದರು.

ಮಳೆ ನಿಲ್ಲದ ಕಾರಣ ರಾತ್ರಿ 10:15ಕ್ಕೆ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು. ನಿಯಮದ ಪ್ರಕಾರ ಭಾರತ ನಿಗದಿತ ಸ್ಕೋರ್‌ಗಿಂತ ಮುಂದಿದ್ದ ಕಾರಣ ವಿಜಯಿ ಎಂದು ಘೋಷಿಸಲಾಯಿತು.

ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅರುಂಧತಿ ರೆಡ್ಡಿ, ಕೇವಲ 22 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಇವರ ಈ ಮಾರಕ ದಾಳಿಗೆ Player of the Match ಪ್ರಶಸ್ತಿ ಒಲಿದಿದೆ.

ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಬರುವ ಗುರುವಾರ ಕ್ಯಾನ್ಬೆರಾದಲ್ಲಿ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !