ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಚ್ರನ್ನು ಮಣಿಸಿದ ಕಾರ್ಲೋಸ್ ಅಲ್ಕರಾಝ್ ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಲ್ಕರಾಝ್, ನೊವಾಕ್ ಜೊಕೊವಿಚ್ ಅವರನ್ನು 6-2, 6-2, 7-6 (7-4) ನೇರ ಸೆಟ್‌ಗಳಿಂದ 7 ಬಾರಿಯ ಚಾಂಪಿಯನ್ ಸರ್ಬಿಯಾದ ಅನುಭವಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.
ಕಳೆದ ಬಾರಿಯೂ ಇದೇ ಜೋಡಿ ವಿಂಬಲ್ಡನ್ ಫೈನಲ್ಗೆ ಲಗ್ಗೆ ಇಟ್ಟಿದ್ದವು. ಆ ಪಂದ್ಯದಲ್ಲಿ ಸರ್ಬಿಯಾದ ಸೂಪರ್ ಸ್ಟಾರ್ ಜೊಕೊವಿಚ್ ಅವರನ್ನು ಇದೇ ಅಲ್ಕರಾಝ್ 1-6, 7-6, 6-1, 3-6, 6-4 ಸೆಟ್‌ಗಳಿಂದ ಮಣಿಸಿ ಚೊಚ್ಚಲ ವಿಂಬಲ್ಡನ್ ಗೆದ್ದು ಬೀಗಿದ್ದರು.