ಕುಡಿತದ ಚಟ ಏನಾದ್ರೂ ಮಾಡಿಸತ್ತೆ! ಬಿಯರ್‌ಗೋಸ್ಕರ ಮಗುವನ್ನು ಮಾರಿದ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕುಡಿತದ ಚಟ ಮನುಷ್ಯನ ಬಳಿ ಏನನ್ನಾದ್ರೂ ಮಾಡಿಸಿಬಿಡುತ್ತದೆ. ಮನೆಯಲ್ಲಿಟ್ಟಿದ್ದ ಹಣ ಕದ್ದು ಹೋಗಿದ್ದು, ಮಕ್ಕಳ ಸ್ಕೂಲ್‌ ಫೀಸ್‌ಗಾಗಿ ಇಟ್ಟ ಹಣವನ್ನು ತೆಗೆದುಕೊಂಡು ಹೆಂಡ ಖರೀದಿಸಿದ್ದ ಸುದ್ದಿಗಳನ್ನು ಓದಿರುತ್ತೀರಿ. ಇಲ್ಲೊಂದು ದಂಪತಿ ಬೀರ್‌ ಕುಡಿಯೋದಕ್ಕಾಗಿ ತಮ್ಮ ಮಗುವನ್ನೇ ಮಾರಿಕೊಂಡಿದೆ.

ಅಮೆರಿಕದ ವಾಷಿಂಗ್ಟನ್​​​ನ ದಂಪತಿ ತಮ್ಮ ಮೂರು ತಿಂಗಳ ಮಗುವನ್ನುಬಿಯರ್‌ ಹಾಗೂ ಹಣಕ್ಕೆ ಮಾರಾಟ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ರೋಜರ್ಸ್‌ನ ಕ್ಯಾಂಪ್‌ಗ್ರೌಂಡ್​​ಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್​ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸೆಪ್ಟೆಂಬರ್ 21 ರಂದು ಹಸುಗೂಸನ್ನು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್ ಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು,ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮಗುವಿನ ಪೋಷಕರು ಅಲ್ಲಿಂದ ಪರಾರಿಯಾಗಿದ್ದಾರೆ.

ಮನೆಯಲ್ಲಿ ಮಾರಾಟ ಮಾಡಿರುವ ಪತ್ರ ಸಿಕ್ಕಿದೆ. ಇಬ್ಬರೂ ಪೋಷಕರು ಪತ್ರಕ್ಕೆ ಸಹಿ ಹಾಕಿರುವ ಸೆಲ್‌ಫೋನ್ ವಿಡಿಯೋವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೀಗ ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್​ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!