October 4, 2026
Sunday, October 4, 2026
spot_img

ನೀರಿಗೆ ಪಾಚಿಯೇ ವೈರಿ, ಜಾತಿಗೆ ಜಾತಿಯೇ ವೈರಿ: ಗೋಪಾಲಕೃಷ್ಣ ನಾಯಕ ಮಾರ್ಮಿಕ ನುಡಿ!

ಹೊಸದಿಗಂತ ಅಂಕೋಲಾ:

ನೀರಿಗೆ ಪಾಚಿಯೇ ವೈರಿ, ಜಾತಿಗೆ ಜಾತಿಯೇ ವೈರಿ ಎಂದು ಇತ್ತೀಚೆಗೆ ಹತ್ಯಾ ಯತ್ನಕ್ಕೆ ಒಳಗಾಗಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡು ಅಂಕೋಲಾ ಬಂದ ಅವರು ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳು , ನಿಮಗೆ ಯಾರ ಮೇಲಾದರೂ ಸಂಶಯ ಇದೆಯೇ…ಎಂಬ ಪ್ರಶ್ನೆಗೆ ಈ ರೀತಿ ಮಾರ್ಮಿಕ ಉತ್ತರ ನೀಡಿದರು.
ಕೊಲ್ಲಲು ನೂರು ಜನ ಇದ್ದಾಗ ಮೇಲೊಬ್ಬ ಕಾಯುವವನೂ ಇರುತ್ತಾನೆ. ದೇವರ ಮತ್ತು ಜನರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ ಎಂದರು.

ಪೊಲೀಸ್ ತನಿಖೆಯ ಮೇಲೆ ನೂರಕ್ಕೆ ನೂರು ವಿಶ್ವಾಸ ಇದೆ. ತನಿಖೆ ಸರಿಯಾಗಿ ಸಾಗಿದ್ದು ಶೀಘ್ರ ಸತ್ಯ ಹೊರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Must Read