ಆಲಿಯಾ ನಟನೆ ಮೆಚ್ಚಿದ ಸಿನಿಪ್ರಿಯರು: ಮೂರೇ ದಿನಕ್ಕೆ 38.5 ಕೋಟಿ ರೂ. ಬಾಚಿದ ಗಂಗೂಬಾಯಿ ಕಠಿಯಾವಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟಿ ಆಲಿಯಾ ಭಟ್‌ ನಟನೆಯ ಗಂಗೂಬಾಯಿ ಕಠಿಯಾವಾಡಿ ಸಿನಿಮಾಗೆ ಸಿನಿಪ್ರಿಯರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಬಿಡುಗಡೆಯಾಗಿ ಮೂರೇ ದಿನಕ್ಕೆ ಭರ್ಜರಿ ಕಲೆಕ್ಷನ್‌ ಆಗಿದೆ.
ಶುಕ್ರವಾರ ರಿಲೀಸ್‌ ಆದ ಚಿತ್ರಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ವೀಕೆಂಡ್‌ ನಲ್ಲಿ ಸಖತ್‌ ಕಲೆಕ್ಷನ್‌ ಮಾಡಿದೆ.
ಮೊದಲ ದಿನ 10.50 ಕೋಟಿ ರೂ. ಗಳಿಸಿದ ಚಿತ್ರ ಎರಡನೇ ದಿನಕ್ಕೆ 13.32 ಕೋಟಿ ರೂ. ಪಡೆದಿದೆ. ಇನ್ನು ಭಾನುವಾರ 15 ಕೋಟಿ ರೂ ಬಾಚಿಕೊಳ್ಳಿವ ಮೂಲಕ ಮೂರೇ ದಿನದಲ್ಲಿ ಬರೋಬ್ಬರಿ 38.82 ಕೋಟಿ ರೂ. ತನ್ನದಾಗಿಸಿಕೊಂಡಿದೆ.
ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಆಲಿಯಾ ತಮ್ಮ ಆಕ್ಟಿಂಗ್‌ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಆಸ್ಟ್ರೇಲಿಯಾದಲ್ಲಿ 1.41 ಕೋಟಿ ರೂ., ನ್ಯೂಜಿಲೆಂಡ್‌ ನಲ್ಲಿ 20.87 ಲಕ್ಷ ರೂ., ಅಮೆರಿಕದಲ್ಲಿ 2.35 ಕೋಟಿ ರೂ. ಗಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!