ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ತಮ್ಮ ಮುದ್ದಾದ ಮಗಳು ರಾಹಾ ಜೊತೆ ಆಗಾಗ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಮಗಳ ಬಗ್ಗೆ ಮಾತನಾಡಿದ ಆಲಿಯಾ ಭಟ್ ನಾನು ಮಾಡಿದ ತಪ್ಪನ್ನು ಮಗಳಿಗೆ ಮಾಡೋದಕ್ಕೆ ಬಿಡೋದಿಲ್ಲ ಎಂದು ಹೇಳಿದ್ದಾರೆ.
ನಾನು ಇಪ್ಪತ್ತು ವರ್ಷಕ್ಕಿಂತ ಮುಂಚೆಯೇ ಮನೆ ಬಿಟ್ಟು ಸಿನಿಮಾದಲ್ಲಿ ಜೀವಿಸಿದೆ. ಯಾವ್ಯಾವುದೋ ದೇಶ, ಊರುಗಳಲ್ಲಿ ಉಳಿದುಕೊಳ್ಳುತ್ತಿದ್ದೆ. ಸಣ್ಣ ವಯಸ್ಸಿಗೇ ಮನೆ ಬಿಟ್ಟೆ, ಅಪ್ಪ ಅಮ್ಮನಿಗೆ ಒಳ್ಳೆಯ ಮಗಳಾಗಲಿಲ್ಲ. ಕೆಲವು ನಿರ್ಧಾರಗಳನ್ನು ನನ್ನಷ್ಟಕ್ಕೇ ನಾನೇ ತೆಗೆದುಕೊಂಡೆ. ಅದು ಸರಿಯಾಗಿರಲಿಲ್ಲ. ಮಗಳ ವಿಷಯದಲ್ಲಿ ಹೀಗಾಗೋದಕ್ಕೆ ಬಿಡೋದಿಲ್ಲ ಎಂದು ಹೇಳಿದ್ದಾರೆ.