ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ಗೆ ಅಕ್ಕ ಶಹೀನ್ ಭಟ್ ಎಂದರೆ ಎಲ್ಲಿಲ್ಲದ ಪ್ರೀತಿ, ಅಕ್ಕನಿಗಾಗಿ ಆಲಿಯಾ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ.
ಆಲಿಯಾ ತನ್ನ ಸೇವಿಂಗ್ಸ್ನಲ್ಲಿ ಅಕ್ಕನಿಗಾಗಿ ಬರೋಬ್ಬರಿ 38 ಕೋಟಿ ರೂಪಾಯಿಯನ್ನು ಫ್ಲಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಮುಂಬೈನ ಬಾಂದ್ರಾ ವೆಸ್ಟ್ನ ಪಲಿ ಹಿಲ್ ಭಾಗದ ಅಪಾರ್ಟ್ಮೆಂಟ್ನಲ್ಲಿ ಮನೆ ಖರೀದಿ ಮಾಡಿದ್ದು, ಇದನ್ನು ಅಕ್ಕನಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ, ತಮ್ಮ ಆಸ್ತಿ ವಿವರಗಳನ್ನು ಪ್ರೈವೇಟ್ ಆಗಿಯೇ ಇಟ್ಟಿದ್ದಾರೆ.