ಸಾಮಾಜಿಕ ಜಾಲತಾಣದಲ್ಲಿ All Eyes On Rafah: ಸೆಲೆಬ್ರಿಟಿಗಳಿಂದ ಭಾರೀ ಬೆಂಬಲ, ಟೀಕೆ, ಗೊಂದಲ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ ಮುಂದುವರೆದಿರುವಂತೆಯೇ,  ಸಾಮಾಜಿಕ ಮಾಧ್ಯಮಗಳಲ್ಲಿ “ಎಲ್ಲರ ಕಣ್ಣು ರಫಾ ಮೇಲೆ” ಪೋಟೋ ವೈರಲ್ ಆಗಿದೆ.

Latest and Breaking News on NDTVತಾರೆಯರು, ಸೆಲೆಬ್ರಿಟಿಗಳು ಪ್ಯಾಲೆಸ್ತೀನ್ ಪರವಾಗಿ ಧ್ವನಿ ಎತ್ತಿದ್ದಾರೆ.

Latest and Breaking News on NDTVಅದೇ ರೀತಿ ರೋಹಿತ್ ಶರ್ಮಾ  ಪತ್ನಿ ರಿತಿಕಾ ಸಜ್ದೇಕ್ ಸಾಮಾಜಿಕ ಜಾಲತಾಣದಲ್ಲಿ ಆಲ್ ಐಸ್ ಆನ್ ರಫಾ ಫೋಟೋ ಶೇರ್ ಮಾಡಿ ಬೆಂಬಲಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ರಫಾ ಬಗ್ಗೆ ಸ್ವಲ್ಪ ಜ್ಞಾನವೂ ಇಲ್ಲದೆ ಸುಮ್ಮನೆ ಮನಬಂದಂತೆ ಪೋಸ್ಟ್‌ ಮಾಡುತ್ತಾರೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಫಾ ಎಲ್ಲಿದೆ ಎನ್ನೋದು ಗೊತ್ತಿದೆಯೇ? ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ, ಕಾಶ್ಮೀರಿ ಪಂಡಿತರ ನರಮೇಧ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಇದರಲ್ಲಿ ಮೌನವಹಿಸಿದ್ದೀರಿ. ಈಗ ಪ್ಯಾಲೆಸ್ತೀನ್ ಪರವಾಗಿ ಮಾತನಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪ್ರಶ್ನಿಸುತ್ತಿದ್ದಂತೆ ರಿತಿಕಾ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ. ಅಲ್ಲಿ ಇಸ್ರೇಲ್‌ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಪ್ಯಾಲೆಸ್ತೀನಿಯರು ಮನೆ ಮಠ ಬಿಟ್ಟು  ಸ್ಥಳಾಂತರಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!