ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ PBKS ವಿರುದ್ಧ RCB ಗೆಲ್ಲಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ. “ಪಂಜಾಬ್ ನವರು ನಮ್ಮ ಜೊತೆ ಮೊದಲು ಕ್ವಾಲಿಫೈಡ್ ಮ್ಯಾಚ್‌ನಲ್ಲಿ 101ಕ್ಕೆ ಔಟ್ ಆಗಿದ್ದರು. ಆದರೆ ನಂತರದಲ್ಲಿ ಮುಂಬೈ ವಿರುದ್ಧ ಗೆದ್ದರು. ಆರ್‌ಸಿಬಿ ನಾಲ್ಕನೆ ಬಾರಿಗೆ ಫೈನಲ್‌ಗೆ ಬಂದಿದೆ. ಈ ಬಾರಿ ಗೆಲ್ಲಲಿ ಎಂದು ಹಾರೈಸುತ್ತೇನೆ. ಗೆದ್ದರೆ ಅಭಿನಂದನೆ ತಿಳಿಸುತ್ತೆನೆ. ಪಂಜಾಜ್ ಗೆದ್ದರೆ ಅವರಿಗೂ ಅಭಿನಂದನೆ ಹೇಳುತ್ತೇನೆ” ಎಂದು ಹೇಳಿದ್ದಾರೆ.