ಜುಲೈ 18ಕ್ಕೆ ಈ ಎಲ್ಲಾ ಸಿನಿಮಾಗಳು OTT ಗೆ ಬರ್ತಿದೆ! ನೀವು ಯಾವ್ದು ನೋಡ್ಬೇಕು ಅನ್ಕೊಂಡಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜುಲೈ 18ನೇ ತಾರೀಖು ಓಟಿಟಿ ಪ್ರೇಕ್ಷಕರಿಗೆ ಸಿನಿಮಾ ದಸರವೆಂದರೂ ತಪ್ಪಾಗಲಾರದು. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜೀ5, ಜಿಯೋಹಾಟ್‌ಸ್ಟಾರ್ ಮತ್ತು ಸನ್‌ನೆಕ್ಸ್ಟ್‌ ಸೇರಿದಂತೆ ಹಲವು ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಹೊಸ ಸಿನಿಮಾಗಳು ಸ್ಟ್ರೀಮಿಂಗ್ ಆಗಲು ಸಜ್ಜಾಗಿವೆ.

ಧನುಷ್-ನಾಗಾರ್ಜುನ್ ಅಭಿನಯದ ಕುಬೇರ, ಮಂಚು ಮನೋಜ್‌ನ ಭೈರವಂ, ಸಂಜಯ್ ದತ್ ನಟನೆಯ ದಿ ಭೂತ್ನಿ, ಜೊತೆಗೆ ದಿ ಡೋರ್, ಸ್ಪೆಷಲ್ ಓಪ್ಸ್ 2 ಮತ್ತು ವೀರ್ ದಾಸ್, ನ್ಯೂ ಎಂಟರ್ಟೈನರ್ ಸೇರಿದಂತೆ ಹಲವಾರು ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿವೆ.

ಕುಬೇರ
ತಮಿಳು ಸಿನಿಮಾ ಪ್ರೇಮಿಗಳಿಗೆ ಧನುಷ್ ಮತ್ತು ನಾಗಾರ್ಜುನ್ ಒಟ್ಟಿಗೆ ನಟಿಸಿರುವ ‘ಕುಬೇರ’ ದೊಡ್ಡ Treat. ಈ ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿರುವ ಈ ಚಿತ್ರ ಪ್ರೈಮ್ ವಿಡಿಯೋದಲ್ಲಿ ಜುಲೈ 18ರಿಂದ ಸ್ಟ್ರೀಮಿಂಗ್ ಆಗಲಿದೆ.

ಭೈರವಂ
ತೆಲುಗು ಆ್ಯಕ್ಷನ್ ಚಿತ್ರ ‘ಭೈರವಂ’ ಜುಲೈ 18ರಂದು ಜೀ5 ನಲ್ಲಿ ಬಿಡುಗಡೆಯಾಗುತ್ತಿದೆ. ವಿಜಯ್ ಕನಕಮೇಡಲ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಮಂಚು ಮನೋಜ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೇ 30ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆದ ಈ ಸಿನಿಮಾ ಈಗ ಓಟಿಟಿಯಲ್ಲಿ ಮತ್ತೊಂದು ಅವಕಾಶ ಪಡೆಯುತ್ತಿದೆ.

ದಿ ಡೋರ್
ಹಾರರ್ ಥ್ರಿಲ್ಲರ್ ಪ್ರೀತಿಸುವವರಿಗೆ ‘ದಿ ಡೋರ್’ ಸಿನಿಮಾ ಆಕರ್ಷಕ ಆಯ್ಕೆ. ಜುಲೈ 18ರಂದು ಸನ್‌ನೆಕ್ಸ್‌ಟ್‌ನಲ್ಲಿ ಸ್ಟ್ರೀಮಿಂಗ್ ಆಗುವ ಈ ಚಿತ್ರದಲ್ಲಿ ಜಾಕಿ ಭಾವನಾ ಮುಖ್ಯ ಪಾತ್ರದಲ್ಲಿದ್ದಾರೆ. ಜೈದೇವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ದಿ ಭೂತ್ನಿ
ಬಾಲಿವುಡ್ ನಟ ಸಂಜಯ್ ದತ್ ಮತ್ತು ಮೌನಿ ರಾಯ್ ನಟಿಸಿರುವ ‘ದಿ ಭೂತ್ನಿ’ ಒಂದು ದೆವ್ವ ಕಥೆಯ ತಿರುವುಳ್ಳ ಸಿನಿಮಾ. ಸಿದ್ಧಾಂತ್ ಸಚ್‌ದೇವ್ ನಿರ್ದೇಶನ ಮಾಡಿರುವ ಈ ಚಿತ್ರ ಜುಲೈ 18ರಂದು ಜೀ5ನಲ್ಲಿ ಪ್ರಸಾರವಾಗಲಿದೆ. ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಓಟಿಟಿಯಲ್ಲಿ ಹೊಸ ಅವಕಾಶ ನಿರೀಕ್ಷಿಸುತ್ತಿದೆ.

ಇನ್ನೂ ಕೆಲವು ಪ್ರಮುಖ ಓಟಿಟಿ ಬಿಡುಗಡೆಗಳು ಹೀಗಿವೆ
ಜಿಯೋಹಾಟ್‌ಸ್ಟಾರ್‌ನಲ್ಲಿ ಜುಲೈ 18ರಂದು ‘ಸ್ಪೆಷಲ್ ಓಪ್ಸ್ 2’ ಬಿಡುಗಡೆ ಆಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಕಾಮಿಡಿ ಟಚ್‌ನೊಂದಿಗೆ ವೀರ್‌ ದಾಸ್; ಪೂಲ್ ವಾಲ್ಯೂಮ್ ಚಿತ್ರವೂ ಇದೇ ದಿನ ಸ್ಟ್ರೀಮಿಂಗ್ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!