ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣವನ್ನು 91ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ.
2013ರಲ್ಲಿ ರಾಮಕೃಷ್ಣ ಎಂಬುವವರು ಖಾಸಗಿಯಾಗಿ ದೂರು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ನ್ಯಾ.ಸಂತೋಷ್ ಗಜಾನನ ಭಟ್ ಅವರಿಂದ ಏಕಸದಸ್ಯ ಪೀಠ, ರಾಮಕೃಷ್ಣ ಅವರ ಆರೋಪಕ್ಕೆ ಪೂರಕ ಸಾಕ್ಷಿ ಇಲ್ಲವೆಂದು ಪಿಸಿಆರ್ ಅನ್ನು ವಜಾಗೊಳಿಸಿದೆ.