ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಣ್ಣಗಳ ಹಬ್ಬ ಹೋಳಿ. ಭಾರತದಲ್ಲಿ ಹೋಳಿ ಹಬ್ಬಕೆ ಅದರದ್ದೇ ಆದ ಮಹತ್ವವಿದೆ ಇಂತಹ ಹಬ್ಬವನ್ನು ಛಪ್ರಿಗಳ ಹಬ್ಬ (ಸಂಸ್ಕೃತಿಹೀನ ಹಬ್ಬ) ಎಂದು ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಹೇಳಿಕೆಯೊಂದನ್ನು ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಹೇಳಿಕೆಗಾಗಿ ಫರಾ ಖಾನ್ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಗುರುವಾರ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಫರಾ ಖಾನ್ ನೀಡಿದ ಛಪ್ರಿ ಎಂಬ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದೆ ಎಂದು ಆರೋಪಿಸಿ ದೂರುದಾರರು ಖಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ಮಾಧ್ಯಮ ಪ್ರಭಾವಿ ವಿಕಾಸ್ ಜಯರಾಮ್ ಫಾಟಕ್ ಅಲಿಯಾಸ್ ಹಿಂದೂಸ್ತಾನಿ ಭಾವು ಶುಕ್ರವಾರ ಈ ಕುರಿತು ದೂರು ಸಲ್ಲಿಸಿದ್ದರು.