ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಲಸಿಕೆ ಶಾಟ್ಸ್ ಗಳ ಅಭಿವೃದ್ಧಿಪಡಿಸುವಲ್ಲಿ ತಂತ್ರಜ್ಞಾನವನ್ನು ನಕಲು ಮಾಡಿದ್ದಕ್ಕಾಗಿ ಮಾಡೆರ್ನಾ , ಫೈಜರ್ ಮತ್ತು ಬಯೋಎನ್ಟೆಕ್ ವಿರುದ್ಧ ಮೊಕದ್ದಮೆ ಹೂಡಿದೆ.
2010 ಮತ್ತು 2016ರ ನಡುವೆ ತನ್ನ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ( mRNA technology ) ಒಳಗೊಂಡಿರುವ ಪೆಂಟೆಂಟ್ ಗಳನ್ನೂ ಫೈಜರ್ ಮತ್ತು ಬಯೋಎನ್ಟೆಕ್ ಎರಡೂ ಉಲ್ಲಂಘಿಸಿವೆ ಎಂದು ಮಾಡೆರ್ನಾ ಶುಕ್ರವಾರ ಹೇಳಿದೆ.
ಎಂಆರ್‌ಎನ್‌ಎ ಎಂಬುದು ಪ್ರತಿ ಜೀವಕೋಶದ ಪ್ರೋಟೀನ್ ತಯಾರಿಸುವ ಯಂತ್ರಗಳಿಗೆ ಡಿಎನ್‌ಎ ಸೂಚನೆಗಳನ್ನು ಸಾಗಿಸುವ ಆನುವಂಶಿಕ ಲಿಪಿಯಾಗಿದೆ. ಎಂಆರ್‌ಎನ್‌ಎ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಕೊರೋನಾ ಲಸಿಕೆಗಳ ಉತ್ಪಾದನೆಯಲ್ಲಿ ಬಳಸಲಾಗಿದೆ.