ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಗ್ರರೊಂದಿಗೆ ನಂಟು ಆರೋಪದ ಮೇರೆಗೆ ಇಬ್ಬರು ಪೊಲೀಸರು ಸಹಿತ ನಾಲ್ವರು ಸರ್ಕಾರಿ ನೌಕರರನ್ನು ಜಮ್ಮು- ಕಾಶ್ಮೀರ ಆಡಳಿತ ಶನಿವಾರ ಸೇವೆಯಿಂದ ವಜಾಗೊಳಿಸಿದೆ.
ಕಾನ್ಸ್ಟೆಬಲ್ಗಳಾದ ಅಬ್ದುಲ್ ರೆಹಮಾನ್ ದಾರ್ ಮತ್ತು ಗುಲಾಮ್ ರಸೂಲ್ ಭಟ್, ಶಿಕ್ಷಕ ಶಬೀರ್ ಅಹ್ಮದ್ ಮತ್ತು ಜಲ ಶಕ್ತಿ ಇಲಾಖೆಯ ಸಹಾಯಕ ಲೈನ್ಮ್ಯಾನ್ ಅನಯತುಲ್ಲಾ ಶಾ ಪಿರ್ಜಾದಾ ಅವರನ್ನು ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.