ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನ ನಾಮದ ಚಿಲುಮೆಯಲ್ಲಿ ಅರಣ್ಯ ಭೂಮಿಯಲ್ಲಿ (Forest) ಅನುಮತಿ ಇಲ್ಲದೇ ಶೂಟಿಂಗ್ ಮಾಡಿದ್ದಾರೆ ಎಂದು ಸಹಾಯಕ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ, ಸ್ಥಳದಲ್ಲಿದ್ದ ಶೂಟಿಂಗ್ ಲೈಟ್ ಸೇರಿದಂತೆ ಕೆಲ ಸಾಮಾಗ್ರಿಗಳನ್ನು ಸೀಜ್ ಮಾಡಲಾಗಿದೆ.
ತರುಣ್ ಸುಧೀರ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಅರಣ್ಯ ಭೂಮಿಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ತುಮಕೂರಿನ ಸಹಾಯಕ ಸಂರಕ್ಷಣಾಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ 5 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸ್ಥಳದಲ್ಲಿದ್ದ ಶೂಟಿಂಗ್ ಲೈಟ್, ಅಡುಗೆ ಸಾಮಾಗ್ರಿಗಳು, ಚೇರ್‌ಗಳು, ಟಿಟಿ ವಾಹನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಇನ್ನು ಈ ಆರೋಪಕ್ಕೆ ತರುಣ್ ಸುಧೀರ್ಸ್ಪಷ್ಟನೆ ನೀಡಿದ್ದಾರೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿಲ್ಲ ಅಂತ ಶೂಟಿಂಗ್ ಮಾಡಿಲ್ಲ ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.
ನಾಮದ ಚಿಲುಮೆಯಲ್ಲಿ ನಾವು ಚಿತ್ರೀಕರಣ ಮಾಡಿಲ್ಲ . ಸ್ಥಳದ ಹತ್ತಿರದಲ್ಲೇ ಡಾಬಾ ಇದ್ದಿದ್ರಿಂದ ಪ್ರೊಡಕ್ಷನ್ ಯುನಿಟ್ ನಿಲ್ಲಿಸಿದ್ವಿ ಅಷ್ಟೇ. ಅದನ್ನು ನೋಡಿದ ದಾರಿಹೋಕರು ಶೂಟಿಂಗ್ ಮಾಡುತ್ತಿದ್ದೇವೆ ಎಂದುಕೊಂಡು ದೂರು ಕೊಟ್ಟಿರಬಹುದು. ಆ ವೇಳೆ, ಸ್ಥಳಕ್ಕೆ ಅಧಿಕಾರಿಗಳು ಬಂದು ದಂಡ ಹಾಕಿದ್ದರು, ನಾವು ಕಟ್ಟಿದ್ದೇವೆ ಎಂದಿದ್ದಾರೆ.
ತಿಂಗಳ ಹಿಂದೆಯೇ ನಾವು ಶೂಟಿಂಗ್‌ಗೆ ಅನುಮತಿ ಅರ್ಜಿ ಹಾಕಿದ್ದು ನಿಜ. ಅನುಮತಿ ಕೊಟ್ಟಿಲ್ಲ ಅಂತ ಚಿತ್ರೀಕರಣ ಮಾಡಿಲ್ಲ. ಸ್ಥಳದಲ್ಲಿ ನಾವ್ಯಾರೂ ಇರಲಿಲ್ಲ, ಯುನಿಟ್ ಹುಡುಗರಿದ್ದರು ಎಂದಿದ್ದಾರೆ.