ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರ್ಮಿಕ ಗ್ರಂಥಗಳು, ಸಿದ್ಧಾಂತಗಳು ಮತ್ತು ನಂಬಿಕೆಗಳ ಪ್ರಕಾರ, ಸಾಮಾನ್ಯ ಪ್ರದೇಶಗಳಲ್ಲಿ ಮಹಿಳೆಯರಿಗೆ ಮಸೀದಿಗಳಿಗೆ ಪ್ರವೇಶಿಸಲು ಅವಕಾಶವಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಆದರೆ ಮಸೀದಿಯೊಳಗೆ ಮಹಿಳೆಯರು ಹಾಗೂ ಮುಸ್ಲಿಮರು ಜೊತಯಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ. ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಬೇಕು ಎಂದು AIMPLB ಹೇಳಿದೆ.
ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಈ ಕುರಿತು AIMPLB ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ. ಈ ಅಫಿದವಿತ್‌ನಲ್ಲಿ ಮಹತ್ವದ ಅಂಶ ಉಲ್ಲೇಖಿಸಿದೆ. ಮುಸ್ಲಿಮ್ ಮಹಿಳೆಯರೂ ಮಸೀದಿಯೊಳಗೆ ಪ್ರವೇಶಿಸಿ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಬುಹುದು ಎಂದಿದೆ.
ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮ್ ಮಹಿಳೆಗೆ ಅವಕಾಶವಿದೆ. ಅದು ಆಕೆಯ ಹಕ್ಕಾಗಿದೆ ಎಂದು AIMPLB ತನ್ನ ಅಫಿದವಿತ್‌ನಲ್ಲಿ ಹೇಳಿದೆ. ಆದರೆ ಧಾರ್ಮಿಕ ಆಚರಣೆಗಳು, ಮುತ್ತಾವಾಲಿಗಳು ಸಂಪೂರ್ಣವಾಗಿ ಮಸೀದಿ ನಿಯಂತ್ರಿಸುವ ಖಾಸಗಿ ಕ್ರಮಗಳು. ಹೀಗಾಗಿ ಈ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರು ಪ್ರವೇಶಿಸಿದರೆ ಅವರಿಗೆ ವ್ಯವಸ್ಥೆ ಮಾಡಲು AIMPLB ಅಥವಾ ನ್ಯಾಯಾಲಕ್ಕೆ ಸಾಧ್ಯವಿಲ್ಲ. ಆದರೆ ಮುಸ್ಲಿಮ್ ಮಹಿಳೆಯರಿಗೆ ದಿನಕ್ಕೆ 5 ಬಾರಿ ನಮಾಜ್ ಹಾಗೂ ಪ್ರಾರ್ಥನೆಗಾಗಿ ಮಸೀದಿಗೆ ಬರುವುದನ್ನು ಕಡ್ಡಾಯ ಮಾಡಿಲ್ಲ. ಆದರೂ ಮುಸ್ಲಿಮ್ ಮಹಿಳೆಯರು ಮಸೀದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು AIMPLB ಹೇಳಿದೆ.
ಅದೇ ರೀತಿ ಅಫಿದವಿತ್‌ನಲ್ಲಿ, ಇಸ್ಲಾಮ್ ಧಾರ್ಮಿಕ ಪಠ್ಯದಲ್ಲಿ ಮಸೀದಿಯೊಳಗೆ ಪುರುಷ ಹಾಗೂ ಮಹಿಳೆ ಜೊತೆಯಾಗಿ ಪ್ರಾರ್ಥನೆ ಸಲ್ಲಿಸುವ ಯಾವುದೇ ಉಲ್ಲೇಖವಿಲ್ಲ. ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕ ಹಾಗೂ ಮದೀನಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮಸೀದಿಯೊಳಗೆ ಪ್ರತ್ಯೇಕ ವ್ಯವಸ್ಥೆಯಲ್ಲೇ ಪ್ರಾರ್ಥನೆ ಮಾಡಬೇಕು. ಮಹಿಳೆಯರು ಹಾಗೂ ಪುರುಷರು ಜೊತೆಯಾಗಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದೆ.
ಇನ್ನು ಫತ್ವಾ ಕುರಿತು ತಿಳಿಸಿದ್ದು, ಇಸ್ಲಾಂ ಧಾರ್ಮಿಕ ಹಾಗೂ ಸಿದ್ಧಾಂತ ಆಧರಿಸಿ ಅಭಿಪ್ರಾಯವಾಗಿದೆ. ಧರ್ಮದಲ್ಲಿ ನಂಬಿಕೆ ಇಟ್ಟವರಿಗೆ, ಧರ್ಮ ಅನುಸರಿಸುವವರಿಗೆ ಕೆಲ ಸಂದರ್ಭದಲ್ಲಿ ಫತ್ವಾ ಹೊರಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಧಾರ್ಮಿಕ ನಂಬಿಕೆ ಹಾಗೂ ಧಾರ್ಮಿಕ ವಿಧಾನವಾಗಿದೆ. ಹೀಗಾಗಿ ಫತ್ವಾ ಹೊರಡಿಸುವುದನ್ನು ನ್ಯಾಯಾಂಗ ನಿರ್ಬಂಧಿಸಲು ಸಾಧ್ಯವಿಲ್ಲ. ಒಂದು ವೇಳೆ ನ್ಯಾಯಾಂಗ ಫತ್ವಾ ನಿರ್ಬಂಧಿಸಲು ಪ್ರಯತ್ನಿಸಿದರೆ ಅದು ಧಾರ್ಮಿಕ ಉಲ್ಲಂಘನೆಯಾಗಲಿದೆ ಎಂದು AIMPLB ಹೇಳಿದೆ.