ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಟಿಆರ್ ಮತ್ತು ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ದೇವರ’ ಶೀಘ್ರದಲ್ಲೇ ಬರಲಿದೆ. ಕಲ್ಯಾಣ್ ರಾಮ್ ನಿರ್ಮಾಣದ ಈ ಚಿತ್ರವು ಶರವೇಗದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ಈ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ‘ಶಾಕುಂತಲಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅರ್ಹಾ, ಇದೀಗ ಎನ್ಟಿಆರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೇ ಎನ್‌ಟಿಆರ್ ಮತ್ತು ಅಲ್ಲು ಅರ್ಜುನ್ ನಡುವೆ ಉತ್ತಮ ಸ್ನೇಹ ಇರುವುದರಿಂದ ಬನ್ನಿ ಕೂಡ ತಕ್ಷಣ ಒಕೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಸಿನಿಮಾದಲ್ಲಿ ಅರ್ಹಾ ಪಾತ್ರ ಕೇವಲ ಹತ್ತು ನಿಮಿಷ. ಆದರೆ ಈ 10 ನಿಮಿಷದ ಪಾತ್ರಕ್ಕೆ ನೀಡುತ್ತಿರುವ ಸಂಭಾವನೆ ತಿಳಿದರೆ ಶಾಕ್ ಆಗುತ್ತೀರಿ.
ಈ ಸಿನಿಮಾದಲ್ಲಿ ನಟಿಸಲು ಅರ್ಹಾ ನಿಮಿಷಕ್ಕೆ 2 ಲಕ್ಷ ಸಂಭಾವನೆ ಪಡೆಯಲಿದ್ದಾರಂತೆ. 10 ನಿಮಿಷಗಳ ರೋಲ್ ಆಗಿರುವುದರಿಂದ ಪೂರ್ಣ ಮೊತ್ತಕ್ಕೆ ಅರ್ಹರಾಗಿರುವ ಅವರು ಈ ಚಿತ್ರದಲ್ಲಿ ನಟಿಸಲು 20 ಲಕ್ಷ ಪಡೆಯುತ್ತಿದ್ದಾರೆ ಎಂದು ತಿಳಿದಿದೆ. ಆದರೆ ಈ ಸುದ್ದಿಯಲ್ಲಿ ಸತ್ಯಾಂಶ ಎಷ್ಟಿದೆಯೋ ಗೊತ್ತಿಲ್ಲ. ಕೇವಲ ಹತ್ತು ನಿಮಿಷದ ಪಾತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಈಗ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಈ ನಡುವೆ ದೇವರ ಚಿತ್ರ ಯೂನಿಟ್ 5ನೇ ಶೆಡ್ಯೂಲ್ ಕೂಡ ಮುಗಿಸಿದೆ. ಈ ಶೆಡ್ಯೂಲ್ ನಲ್ಲೂ ಅದ್ಧೂರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.