ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಪುಷ್ಪ-2 ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಸೆಟ್‌ನಿಂದ ಅಲ್ಲು ಅರ್ಜುನ್ ಫೋಟೊ ಲೀಕ್ ಆಗಿದೆ.
ಸಿನಿಮಾ ರಿಲೀಸ್‌ಗೂ ಮುನ್ನವೇ ಅಲ್ಲು ಅರ್ಜುನ್ ಸೀರೆ ಉಟ್ಟಿರುವ ಫೋಟೊ ಲೀಕ್ ಆಗಿದ್ದು, ಟೀಂ ಬೇಸರಿಸಿಕೊಂಡಿದೆ.
ಸೀರೆ ಉಟ್ಟು ಶೂಟ್‌ಗಾಗಿ ಕಾಯುತ್ತಿದ್ದ ವೇಳೆ ಯಾರೋ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕ್ಲೈಮಾಕ್ಸ್ ಸೀನ್‌ನ ಲುಕ್ ಅದಾಗಿದೆ ಎನ್ನಲಾಗಿದೆ.
ಈ ಹಿಂದೆ ಪೋಸ್ಟರ್ ಬಿಡುಗಡೆ ವೇಳೆ ಕೂಡ ಅಲ್ಲು ಇದೇ ಸೀರೆ ಉಟ್ಟಿದ್ದು, ಇದು ಫೈನಲ್ ಲುಕ್ ಎಂದು ಜನರಿಗೆ ತಿಳಿದಿದೆ. ಆದರೆ ಟೀಂ ಮಾತ್ರ ಈಗಲೇ ಲುಕ್ ರಿವೀಲ್ ಆಯ್ತಲ್ಲಾ ಎಂದು ಬೇಸರ ಮಾಡಿಕೊಂಡಿದೆ.