ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸಿಗರ ಭೇಟಿಯಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ ಹೊಸ ದಾಖಲೆ ಬರೆದಿದೆ.
ಅಂಕಿ ಅಂಶಗಳ ಪ್ರಕಾರ, ಈ ವರ್ಷ ಉದ್ಯಾನವನಕ್ಕೆ ಬರೋಬ್ಬರಿ 3,27,493 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ 3,13,574 ಮಂದಿ ಭಾರತೀಯರಾಗಿದ್ದರೆ, 13,919 ಮಂದಿ ವಿದೇಶಿ ಪ್ರವಾಸಿಗರಾಗಿದ್ದಾರೆ.
ಡಾಲ್ಫಿನ್ ವೀಕ್ಷಣೆಗೆ ಬೋಟ್ ಸಫಾರಿ, ಜಂಗಲ್ ಸಫಾರಿ, ಆನೆ ಸಫಾರಿ, ಸೈಕ್ಲಿಂಗ್ ಟ್ರಯಲ್, ಚಾರಣದಂತಹ ಆಯ್ಕೆಗಳು ಇಲ್ಲಿದ್ದು, 2023ರ ಅಕ್ಟೋಬರ್ ಮಧ್ಯದಲ್ಲಿ ಈ ಉದ್ಯಾನವಕ್ಕೆ ಪ್ರವಾಸಿಗರ ಭೇಟಿಯನ್ನು ಅನುಮತಿಸಲಾಗಿತ್ತು.