ಒಳ್ಳೆಯದನ್ನು ಮಾಡುವ ಗೆಳೆಯರ ಜೊತೆ ಸದಾ ಇರಿ: ವೈರಲ್ ಆಯಿತು ಪವಿತ್ರಾ ಗೌಡ ಪೋಸ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಸಿಕ್ಮೇಲೆ ಸದ್ಯ ಹೊರ ಬಂದಿರುವ ಪವಿತ್ರಾ ಗೌಡ ಹಂಚಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮ್ಮ ಸುತ್ತ ಒಳ್ಳೆಯ ಸ್ನೇಹಿತರು ಇರಬೇಕು ಎಂದು ಆಪ್ತರ ಬಗ್ಗೆ ಮಾತನಾಡಿದ್ದಾರೆ.

ನಮ್ಮ ಸುತ್ತ ಒಳ್ಳೆಯ ಸ್ನೇಹಿತರು ಇರೋದು ಎಷ್ಟು ಮುಖ್ಯ ಎಂಬುದನ್ನು ನಾನು ಕಲಿತೆ. ನಿಮ್ಮ ಜೊತೆ ಇದ್ದುಕೊಂಡು ಒಳ್ಳೆಯದನ್ನೇ ಮಾಡಲು ಪುಶ್ ಮಾಡುತ್ತಾರೆ. ನೀವು ಕೆಳಗೆ ಬೀಳಲು ಬಿಡುವುದಿಲ್ಲ. ನನಗೂ ಒಳ್ಳೆಯ ಫ್ರೆಂಡ್ಸ್ ಇದ್ದಾರೆ ಎಂದು ನಟಿ ರಾಶಿ ಖನ್ನಾ ಮಾತನಾಡಿರುವ ವಿಡಿಯೋನ ಪವಿತ್ರಾ ಶೇರ್ ಮಾಡಿಕೊಂಡಿದ್ದಾರೆ.

ಒಳ್ಳೆಯದನ್ನು ಮಾಡುವ ಗೆಳೆಯರ ಜೊತೆ ಸದಾ ಇರಿ. ನಿಮ್ಮ ತಳ್ಳುವವರ ಜೊತೆ ಅಲ್ಲ. ನೀನು ನನ್ನನ್ನು ಭೇಟಿ ಮಾಡಿಯೇ ಇಲ್ಲ, ನೀನು ನನಗೆ ಸಮಯ ಕೊಡಲೇ ಇಲ್ಲ ಎಂದು ಹೇಳುವವರು ಗೆಳೆಯರಲ್ಲ. ಭೇಟಿ ಆಗದಿದ್ದರೂ ಪರವಾಗಿಲ್ಲ, ನಾನು ನಿನ್ನ ಪರವಾಗಿ ನಿಲ್ಲುತ್ತೇನೆ ಎನ್ನುವವರು ಸ್ನೇಹಿತರು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದನ್ನು ನಟಿ ಹಂಚಿಕೊಂಡಿದ್ದಾರೆ. ಈ ಮೂಲಕ ನಟಿ ಯಾರಿಗೆ ಟಾಂಗ್ ಕೊಟ್ರು ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!